ಗ್ಯಾರಂಟಿ ಯೋಜನೆಗಳು ನಿಲ್ಲುವದಿಲ್ಲ : ಚಲನಚಿತ್ರ ನಟಿ ಉಮಾಶ್ರೀ

0
umashree
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಿದ್ದರಾಮಯ್ಯನವರ ಸರಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿರುವದನ್ನು ಟೀಕಿಸಿದ್ದ ವಿಪಕ್ಷಗಳು ಇದೀಗ ಅವುಗಳ ಯಶಸ್ವಿ ಅನುಷ್ಠಾನದಿಂದ ಕಂಗಾಲಾಗಿವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಯೋಜನೆ ಮಾಡುವದು ಆಗಲಿಲ್ಲ, ಆದರೆ ಗ್ಯಾರಂಟಿ ಯೋಜನೆಗಳ ಯಶಸ್ಸು ನೋಡಿ ಹತಾಶರಾಗಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವದಿಲ್ಲ ಎಂದು ಮಾಜಿ ಸಚಿವೆ, ಚಲನಚಿತ್ರ ನಟಿ ಉಮಾಶ್ರೀ ಸ್ಪಷ್ಟಪಡಿಸಿದರು.

Advertisement

ಅವರು ಲಕ್ಷ್ಮೇಶ್ವರ ಸಮೀಪದ ಶಿಗ್ಲಿ ಗ್ರಾಮದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ದೇವಾಂಗ ಸಮಾಜ ಮತ್ತು ಸಾರ್ವಜನಿಕರ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.

ಬಹುತೇಕ ಮನೆಗಳಲ್ಲಿ ಗ್ಯಾರಂಟಿ ಯೋಜನೆಗಳ ಲಾಭ ಪಡೆದವರಿದ್ದು, ಮನೆಯೊಡತಿಗೆ ರೂ.2000, 10 ಕೆಜಿ ಅಕ್ಕಿ, ಯುವನಿಧಿ, ಗೃಹಜ್ಯೋತಿ, ಶಕ್ತಿ ಯೋಜನೆ ಇತ್ಯಾದಿಗಳನ್ನು ಅನುಷ್ಠಾನಗೊಳಿಸಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದ ಜನರ ನೋವಿಗೆ ಸ್ಪಂದಿಸುವ ಸರಕಾರ ಇದ್ದು, ವಿರೋಧ ಪಕ್ಷಗಳ ಟೀಕೆಯಿಂದ ಮತದಾರರ ಮೇಲೆ ಪರಿಣಾಮ ಬೀರುವದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕರುಗಳಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಗಡ್ಡದೇವರಮಠ, ಗುರುನಾಥ ದಾನಪ್ಪನವರ, ರಾಮಣ್ಣ ಲಮಾಣಿ(ಶಿಗ್ಲಿ), ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷೆ ದುಂಡವ್ವ ಹಾದಿಮನಿ, ನೀಲವ್ವ ಬೋಳಮ್ಮನವರ, ಬಾಬಣ್ಣ ಪಟ್ಟಣದ, ಯಲ್ಲಪ್ಪ ತಳವಾರ, ರಾಜರತ್ನ ಹುಲಗೂರ, ರಫೀಕ ಕಲಬುರ್ಗಿ, ಸುಶೀಲವ್ವ ಲಮಾಣಿ, ರಾಜು ಮಡಿವಾಳರ, ರಾಜು ಓಲೇಕಾರ, ಪರಮೇಶ ಲಮಾಣಿ, ಪದ್ಮರಾಜ ಪಾಟೀಲ, ತಿಪ್ಪಣ್ಣ ಸಂಶಿ, ಜಂತ್ರವ್ವ ನಾಯಕ್, ಸಂತೋಷ ತಾಂದಳೆ, ಸುರೇಶ ಸ್ವಾದಿ, ಭರತ್ ಬಳಿಗಾರ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

ಸರಕಾರದಿಂದ ಪ್ರಯೋಜನ ಪಡೆದ ಪ್ರತಿಯೊಬ್ಬರೂ ಆನಂದಸ್ವಾಮಿಯವರಿಗೆ ಮತ ನೀಡುವ ಮೂಲಕ ಆನಂದದ ಗೆಲುವು ನೀಡುವ ವಿಶ್ವಾಸವನ್ನು ನಾವು ಕಾಣುತ್ತಿದ್ದೇವೆ. ಎಲ್ಲರೂ ಮತದಾನ ಮಾಡಿ ಆನಂದಸ್ವಾಮಿಯವರನ್ನು ಆಯ್ಕೆ ಮಾಡುವಂತೆ ಉಮಾಶ್ರೀ ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here