ವಿದ್ಯಾರ್ಥಿನಿ ಮೇಲೆ 2 ವರ್ಷಗಳಿಂದ ಲೈಂಗಿಕ ದೌರ್ಜನ್ಯ: ಅತಿಥಿ ಉಪನ್ಯಾಸಕನ ಬಂಧನ

0
Spread the love

ಬೆಳಗಾವಿ: ಬೆಳಗಾವಿಯ ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕರೊಬ್ಬರ ವಿರುದ್ಧ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.

Advertisement

ಈ ಸಂಬಂಧ ಪೊಲೀಸರು ಆರೋಪಿ ಉಪನ್ಯಾಸಕನನ್ನು ಬಂಧಿಸಿದ್ದಾರೆ. ನಾಗೇಶ್ವರ ದೇಮಿನಕೊಪ್ಪ ಎಂಬವರೇ ಅತ್ಯಾಚಾರ ಎಸಗಿರುವ ಆರೋಪಿಯಾಗಿದ್ದು,  ಕಳೆದ ಎರಡು ವರ್ಷಗಳಿಂದ ಆರೋಪಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದಾನೆ ಎನ್ನಲಾಗಿದೆ.

ಈ ವಿಷಯ ಬಹಿರಂಗಪಡಿಸದಂತೆ ತನಗೆ ಜೀವ ಬೆದರಿಕೆ ಕೂಡ ಹಾಕಿದ್ದ ಎಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ಉಪನ್ಯಾಸಕನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here