`ಗುರುಕುಮಾರ ಪಂಚಾಕ್ಷರಿ ಸನ್ಮಾನ’ ಕಾರ್ಯಕ್ರಮ

0
hoovinahadagali
Spread the love

ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ : ಜಂಗಮ ಕ್ಷೇತ್ರ ಶ್ರೀ ಚನ್ನವೀರ ಮಹಾಶಿವಯೋಗಿಗಳವರ ಮಠ ಲಿಂಗನಾಯಕನಹಳ್ಳಿ ಇವರ ಕೃಪಾಶ್ರಯದಲ್ಲಿ 300ನೇ ಶಿವಾನುಭವ, ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಉತ್ಸವ, ಪಂಚಾಕ್ಷರಿ ಗದಗ ಘರಾನಾ ಸಮ್ಮೇಳನ ಹಾಗೂ ಗುರುಕುಮಾರ ಪಂಚಾಕ್ಷರಿ ಸನ್ಮಾನ-2024 ಕಾರ್ಯಕ್ರಮ ಮಾ. 10ರಂದು ಬೆಳಿಗ್ಗೆ 10 ಗಂಟೆಗೆ ಲಿಂಗನಾಯಕನಹಳ್ಳಿಯ ಜಂಗಮಕ್ಷೇತ್ರ ಶ್ರೀ ಚನ್ನವೀರೇಶ್ವರ ಮಠದಲ್ಲಿ ಜರುಗಲಿದೆ.

Advertisement

ಮಾ. 10ರಂದು ಬೆಳಿಗ್ಗೆ 9.30 ಶ್ರೀಗುರು ಕುಮಾರೇಶ್ವರ ವೇದಿಕೆಯಲ್ಲಿ ರಾಷ್ಟ್ರೀಯ ಘರಾನಾ ಸಮ್ಮೇಳನ ಉದ್ಘಾಟನಾ ಸಮಾರಂಭ ಜರುಗಲಿದೆ. ಪೂಜ್ಯಶ್ರೀ ಚೆನ್ನವೀರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.

ಹೊಳಲಿನ ಪೂಜ್ಯಶ್ರೀ ಚನ್ನಬಸವ ದೇವರು, ಲಿಂಗನಾಯಕನಹಳ್ಳಿಯ ಪೂಜ್ಯಶ್ರೀ ನಿರಂಜನ ದೇವರು ನೇತೃತ್ವ ವಹಿಸುವರು. ಗದುಗಿನ ಶ್ರೀಗುರು ಪಂಚಾಕ್ಷರಿ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಂ. ಡಾ. ರಾಜಗುರು ಗುರುಸ್ವಾಮಿ ಕಲಿಕೇರಿ ಅಧ್ಯಕ್ಷತೆ ವಹಿಸುವರು. ಗದುಗಿನ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ವೇ. ಮಹೇಶ್ವರ ಸ್ವಾಮೀಜಿ ಹೊಸಹಳ್ಳಿಮಠ ಸಮ್ಮುಖ ವಹಿಸುವರು.

ವಿ.ಪ ಉಪ ಸಭಾಪತಿ ರುದ್ರಪ್ಪ ಲಮಾಣಿ ವೇದಿಕೆಯನ್ನು ಉದ್ಘಾಟಿಸುವರು. ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸುವವರು. ಲಿಂಗನಾಯಕನಹಳ್ಳಿಯ ಚಿಕ್ಕಪ್ಪ ಬಣಕಾರ ಅವರಿಂದ ಶಿವಾನುಭವ ಸಂಪದವಾಗುವುದು. ಮುಖ್ಯ ಅತಿಥಿಗಳಾಗಿ ಹೂವಿನಹಡಗಲಿಯ ಬಿಜೆಪಿ ಮುಖಂಡ ಓದು ಗಂಗಪ್ಪನವರು ಆಗಮಿಸುವರು.

ಮಧ್ಯಾಹ್ನ 2 ಗಂಟೆಗೆ ಗುರುಕುಮಾರ ಪಂಚಾಕ್ಷರಿ ಸಮ್ಮಾನ ಸಮಾರಂಭ ಜರಗುವುದು. ಸಾನಿಧ್ಯವನ್ನು ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರದ ಪೂಜ್ಯಶ್ರೀ ಚೆನ್ನವೀರ ಮಹಾಸ್ವಾಮಿಗಳು ವಹಿಸುವರು. ಪಂ. ಡಾ. ರಾಜಗುರು ಗುರುಸ್ವಾಮಿ ಕಲಿಕೇರಿ ಅಧ್ಯಕ್ಷತೆ ವಹಿಸುವರು. ಗದುಗಿನ ಅಡವೇಂದ್ರಸ್ವಾಮಿ ಮಠದ ಧರ್ಮದರ್ಶಿ ವೇ. ಮಹೇಶ್ವರ ಸ್ವಾಮೀಜಿ ಹೊಸಹಳ್ಳಿಮಠ ಸಮ್ಮುಖ ವಹಿಸುವರು. ಬಳ್ಳಾರಿಯ ಮಾಜಿ ಸಚಿವ ಬಿ.ಶ್ರೀರಾಮುಲು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹೂವಿನಹಡಗಲಿಯ ಶಾಸಕ ಕೃಷ್ಣಾ ನಾಯಕ, ಹಿರೆಕುರುವತ್ತಿ ಗ್ರಾ.ಪಂ ಅಧ್ಯಕ್ಷ ಭರಮಪ್ಪ ಕುಂಚೂರು ಆಗಮಿಸುವರು.

ಇದೇ ಸಂದರ್ಭದಲ್ಲಿ ಗುರುಕುಮಾರ ಪಂಚಾಕ್ಷರಿ ಸಮ್ಮಾನ-2024 ಪುರಸ್ಕೃತ ಧಾರವಾಡದ ಖ್ಯಾತ ಗಾಯಕ ಪಂ. ಸೋಮನಾಥ ಮರಡೂರ ಅವರಿಂದ ಸಂಗೀತ ಕಾರ್ಯಕ್ರಮ ಜರಗುವುದು ಎಂದು ಗದುಗಿನ ಶ್ರೀ ಗುರು ಪಂಚಾಕ್ಷರಿ ಸೇವಾ ಸಮಿತಿಯ ಕಾರ್ಯದರ್ಶಿ ಮಲ್ಲಯ್ಯ ಶಿರೋಳಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here