ಇಂದು ಹುಟ್ಟೂರಿಗೆ ಹನುಮಂತ ಭೇಟಿ: ಬಿಗ್ ಬಾಸ್ ವಿನ್ನರ್ ಸ್ವಾಗತಕ್ಕೆ ಭರ್ಜರಿ ತಯಾರಿ
ತನ್ನ ಹಾಡಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದ ಹನುಮಂತ ಇದೀಗ ಬಿಗ್ ಬಾಸ್ ಮೂಲಕ ಕೋಟ್ಯಾಂತರ ಮಂದಿಯ ಮನಸ್ಸು ಗೆದ್ದಿದ್ದಾರೆ. ಬಿಗ್ ಬಾಸ್ ಟ್ರೋಪಿಗೆ ಮುತ್ತಿಡುವ ಮೂಲಕ ಹನುಮಂತ ಇತಿಹಾಸ ನಿರ್ಮಿಸಿದ್ದಾರೆ. ಬಿಗ್ ಬಾಸ್ ಟ್ರೋಪಿ ಗೆದ್ದ ಬಳಿಕ ಹನುಮಂತ ಇಂದು ತಮ್ಮ ಗ್ರಾಮಕ್ಕೆ ತೆರಳುತ್ತಿದ್ದು ಹನುಮಂತನ ಸ್ವಾಗತಕ್ಕೆ ಗ್ರಾಮಸ್ಥರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
ಇಂದು ಹನುಮಂತ ತಮ್ಮ ಹುಟ್ಟೂರಾದ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರುಬಡ್ನಿಗೆ ತೆರಳಲಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಬಿಗ್ ಬಾಸ್ ವಿನ್ನರ್ ಸ್ವಾಗತಕ್ಕೆ ಇಡೀ ಊರಿಗೆ ಊರೇ ಸಜ್ಜಾಗಿದೆ.
ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ ಹಾಗೂ ಜಾಂಜ್ ಮೇಳೆ ಸೇರಿದಂತೆ ವಿವಿಧ ಕಲಾತಂಡಗಳ ಮೂಲಕ ಸ್ವಾಗತ ಮಾಡಲಿದ್ದಾರೆ. ಅಲ್ಲದೆ ಕೆಲವು ಅಭಿಮಾನಿಗಳು ಈಗಾಗಲೇ ಹನುಮಂತ ಅವರನ್ನು ನೋಡಲು ಮನೆಗೆ ಆಗಮಿಸಿದ್ದು ಹನುಮಂತನ ಆಗಮನಕ್ಕೆ ಎದುರು ನೋಡ್ತಿದ್ದಾರೆ.
ಝೀ ಕನ್ನಡ ವಾಹಿನಿಯಲ್ಲಿ ತಮ್ಮ ಹಾಡಿನ ಮೂಲಕವೇ ಅಭೀಮಾನಿಗಳ ಮನ ಗೆದ್ದ ಹನುಮಂತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಹನುಮಂತ ತಮ್ಮ ಸರಳ ನಡೆ,ನಡಿಗಳ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.