ಹಿರಿಯರ ಆಶೀರ್ವಾದದಲ್ಲಿ ಶಕ್ತಿಯಿದೆ : ಆನಂದ ಕಾಳೆ

0
Hanumana Chalisa chanting satsang meeting
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಚಿಕ್ಕವರು ಗುರು-ಹಿರಿಯರಿಗೆ ನಮಸ್ಕಾರ ಮಾಡಿದಾಗ ಅವರು ನಮ್ಮನ್ನು ಹರಸುತ್ತಾರೆ. ಹೀಗೆ ಅವರು ನೀಡುವ ಆಶೀರ್ವಾದದಲ್ಲಿ ದೊಡ್ಡ ಶಕ್ತಿ ಇದೆ. ಇದರಿಂದ ವ್ಯಕ್ತಿಗೆ ಜೀವನದಲ್ಲಿ ಉನ್ನತ ಸ್ಥಾನಗಳು ದೊರಕುತ್ತವೆ ಎಂದು ಆನಂದ ಕಾಳೆ ಹೇಳಿದರು.

Advertisement

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದಿರುವ ಹನುಮಾನ ಚಾಲೀಸಾ ಪಠಣದ ಸತ್ಸಂಗ ಸಭೆಯಲ್ಲಿ ಅವರು ಮಾತನಾಡಿದರು.

ಇದೊಂದು ಸಂಸ್ಕಾರವಾಗಿದ್ದು, ಇದರಿಂದ ವ್ಯಕ್ತಿಯ ಜೀವನದಲ್ಲಿ ಬದಲಾವಣೆಗಳನ್ನು ಕಾಣಬಹುದು. ಹಿರಿಯರು ಹೇಳುವ ಮಾತುಗಳಿಗೆ ಕಿರಿಯರು ಗೌರವ ನೀಡುವುದನ್ನು ನಾವು ಶ್ರೀಕೃಷ್ಣನ ಜೀವನದಿಂದ ಕಲಿಯಬಹುದು. ಆತ ಸಾಕ್ಷಾತ್ ಭಗವಂತನಾಗಿದ್ದೂ, ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದು ಹೇಗೆ ಎಂಬುದನ್ನು ಆತ ತೋರಿಸಿಕೊಟ್ಟಿದ್ದಾನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇ.ಮೂ. ವಿಶ್ವನಾಥಭಟ್ಟ ವೈದ್ಯ, ಶೇಷಗಿರಿ ಕುಲಕರ್ಣಿ, ಬಿ.ಎಲ್. ಕುಲಕರ್ಣಿ, ಬಾಬುರಾವ ಕಾಳೆ, ನಾಗೇಶಭಟ್ಟ ಗ್ರಾಮಪುರೋಹಿತ, ನಿವೃತ್ತ ಉಪನ್ಯಾಸಕ ಎಸ್.ಎಚ್. ಕುಲಕರ್ಣಿ, ಎ.ಜಿ. ಕುಲಕರ್ಣಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ, ಅಜಿತ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಡಾ. ಪ್ರದ್ಯುಮ್ನ ಕುಲಕರ್ಣಿ, ಅಜಿತ ಕುಲಕರ್ಣಿ, ಆನಂದ ಕುಲಕರ್ಣಿ, ಶಿಕ್ಷಕ ಎ.ಟಿ. ಮಳ್ಳಳ್ಳಿ, ಉಮೇಶ ಧಾರವಾಡ, ವಿಜಯಕುಮಾರ, ಡಾ. ಸಪ್ನಾ ಕಾಳೆ, ವಿಮಲಾಬಾಯಿ ಗ್ರಾಮಪುರೋಹಿತ, ಸೀಮಾ ಕೊಂಡಿ ಅನಿತಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ,ಲಕ್ಷಿö್ಮ ಗ್ರಾಮಪುರೋಹಿತ, ಶೋಭಾ ಸೂರಭಟ್ಟನವರ, ಸನ್ಮತಿ ಸದರಜೋಷಿ, ಭಾಗ್ಯಾಬಾಯಿ ಕಾಳೆ, ಸುಮಾ ಕುಲಕರ್ಣಿ, ಮಂಗಳಾ ಕುಲಕರ್ಣಿ, ರೇಣುಕಾ ಗ್ರಾಮಪುರೋಹಿತ, ಜಯಶ್ರೀ ಗ್ರಾಮಪುರೋಹಿತ, ರೇಣುಕಾ ಗ್ರಾಮಪುರೋಹಿತ, ಪ್ರಭಾ ಕುಲಕರ್ಣಿ, ಸರೋಜಾ ನಾಡಿಗೇರ, ವಿದ್ಯಾ ಕುಲಕರ್ಣಿ, ಜಯಶ್ರೀ ಕುಲಕರ್ಣಿ, ರಾಜಶ್ರೀ ಕುಲಕರ್ಣಿ, ಜ್ಯೋತಿ ನಾಡಿಗೇರ, ಸಂಧ್ಯಾ ಕುಲಕರ್ಣಿ, ರೂಪಾ ಗ್ರಾಮಪುರೋಹಿತ, ಸುಶಿಲಾ ಪುರಾಣಿಕ ಮುಂತಾದವರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here