ಬೀಟ್ರೂಟ್ ತರಕಾರಿಯಷ್ಟೇ ಅದರ ಎಲೆಗಳಲ್ಲಿಯೂ ಸಮೃದ್ಧ ಪೋಷಕಾಂಶಗಳು ಅಡಕವಾಗಿವೆ ಎಂಬುದು ಹಲವರಿಗೆ ತಿಳಿದಿಲ್ಲ. ತಜ್ಞರ ಪ್ರಕಾರ, ಬೀಟ್ರೂಟ್ ಎಲೆಗಳ ನಿಯಮಿತ ಸೇವನೆ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಉಪಕಾರಿಯಾಗುತ್ತದೆ. ವಿಟಮಿನ್ ಎ, ಸಿ, ಬಿ6, ಕಬ್ಬಿಣ, ನಾರು, ಮೆಗ್ನೀಸಿಯಮ್ ಮತ್ತಿತರ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಎಲೆಗಳು ದೇಹದ ಹಲವಾರು ಭಾಗಗಳ ಸುಸ್ಥಿತಿಗಾಗಿ ನೆರವಾಗುತ್ತವೆ.
ಬೀಟ್ರೂಟ್ ಎಲೆಗಳಲ್ಲಿ ಇರುವ ಫೋಲೇಟ್ ಅಂಶ ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಸಹಾಯಕವಾಗಿದ್ದು, ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಈ ಎಲೆಗಳಲ್ಲಿ ಇರುವ ನೈಸರ್ಗಿಕ ನೈಟ್ರೇಟ್‌ಗಳು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತವೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.
ಕಣ್ಣುಗಳ ಆರೋಗ್ಯಕ್ಕೂ ಬೀಟ್ರೂಟ್ ಎಲೆಗಳು ಉಪಯುಕ್ತ. ವಿಟಮಿನ್ ಎ ಮತ್ತು ಆಂಟಿಆಕ್ಸಿಡೆಂಟ್‌ಗಳ ಪರಿಣಾಮ ಕಣ್ಣುಗಳ ದೃಷ್ಟಿ ಸುಧಾರಿಸಲು ಸಹಕಾರಿ.ಜೀರ್ಣಕ್ರೀಯೆಗೆ ಅಗತ್ಯವಾದ ಕರಗುವ ಮತ್ತು ಕರಗದ ನಾರುಗಳೆರಡನ್ನೂ ಹೊಂದಿರುವ ಬೀಟ್ರೂಟ್ ಎಲೆಗಳು ಕರುಳಿನ ಆರೋಗ್ಯವನ್ನು ಬಲಪಡಿಸುತ್ತವೆ. ನಿಯಮಿತ ಸೇವನೆಯಿಂದ ಗುಡ್ ಬ್ಯಾಕ್ಟೀರಿಯಾದ ಬೆಳವಣಿಗೆ ಹೆಚ್ಚಾಗಿ ಜೀರ್ಣ ಸಮಸ್ಯೆಗಳು ಕಡಿಮೆಯಾಗುತ್ತವೆ.
ತೂಕ ಕಡಿಮೆ ಮಾಡಲು ಬಯಸುವವರಿಗೆ ಕೂಡ ಬೀಟ್ರೂಟ್ ಎಲೆಗಳು ಅನುಕೂಲಕರ. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುವುದರಿಂದ ಹೊಟ್ಟೆ ತುಂಬಿದ ಭಾಸವಾಗುತ್ತದೆ, ಇದರಿಂದ ಆಹಾರದ ಪ್ರಮಾಣ ಸಹಜವಾಗಿ ಕಡಿಮೆಯಾಗುತ್ತದೆ.
ಅಷ್ಟೇ ಅಲ್ಲ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಂಶಗಳ ಕಾರಣ ಬೀಟ್ರೂಟ್ ಎಲೆಗಳು ಮೂಳೆಗಳ ಬಲವರ್ಧನೆಗೆ ಸಹಾಯ ಮಾಡುತ್ತವೆ. ವಿಟಮಿನ್ ಬಿ6 ನಿಂದ ಮೆದುಳಿನ ಕಾರ್ಯಕ್ಷಮತೆ ಸುಧಾರಣೆ, ಸ್ಮರಣಶಕ್ತಿ ವೃದ್ಧಿ ಕಂಡುಬರುತ್ತದೆ. ಬೀಟ್ರೂಟ್ ಎಲೆಗಳನ್ನು ಆಹಾರದಲ್ಲಿ ಸೇರಿಸುವುದು ದೈನಂದಿನ ಪೋಷಕಾಂಶದ ಕೊರತೆಯನ್ನು ಭರ್ತಿ ಮಾಡುವುದಲ್ಲದೆ ದೀರ್ಘಕಾಲದ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಕಾರಿ.



