ನೂರು ದೇಶಗಳನ್ನು ಪ್ರವಾಸ ಮಾಡಿದ್ರೂ ಒಬ್ಬರಾದ್ರೂ ಪಾಕಿಸ್ತಾನವನ್ನು ವಿರೋಧ ಮಾಡಿದ್ರಾ?: ಪ್ರಿಯಾಂಕ್ ಖರ್ಗೆ ಪ್ರಶ್ನೆ

0
Spread the love

ಬೆಂಗಳೂರು: ನೂರು ದೇಶಗಳನ್ನು ಪ್ರವಾಸ ಮಾಡಿದ್ರೂ ಒಬ್ಬರಾದ್ರೂ ಪಾಕಿಸ್ತಾನವನ್ನು ವಿರೋಧ ಮಾಡಿದ್ರಾ? ಎಂದು ಸಚಿವ  ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಜೊತೆ ಓಪನ್ ಆಗಿ ಟರ್ಕಿ, ಚೀನಾ ಬಂತು. ನಮ್ಮ ಜೊತೆ ಯಾವುದಾದರೂ ದೇಶ ಬಂದಿದ್ಯಾ? ಮೋದಿ ನೂರು ದೇಶಗಳನ್ನು ಪ್ರವಾಸ ಮಾಡಿದ್ದರು.

Advertisement

ಎಲ್ಲಾ ಪ್ರಧಾನಿಗಳನ್ನ ಅಪ್ಪಿಕೊಂಡರು. ಒಬ್ಬರಾದರೂ ಸಹಾಯಕ್ಕೆ ಬಂದರಾ? ಹುಚ್ಚರ ಜಾತ್ರೆ ನಡೆದಿದೆ. ಬಾಯ್ಕಾಟ್ ಟರ್ಕಿ, ಅಜರ್‌ಬೈಜಾನ್ ಎಂದು ಹೇಳುತ್ತಿದ್ದಾರೆ. ಬಾಯ್ಕಾಟ್ ಅಮೆರಿಕಾ, ಬಾಯ್ಕಾಟ್ ಟ್ರಂಪ್ ಮಾಡುತ್ತಾರಾ? ಬಾಯ್ಕಾಟ್ ಚೀನಾ ಎಂದು ಹೇಳುವ ಧೈರ್ಯ ಇದೆಯಾ? ಜೈಶಂಕರ್ ಚೀನಾ ಜೊತೆ ಯುದ್ಧ ಮಾಡೋಕೆ ಆಗುವುದಿಲ್ಲ ಎಂದರು.

ಇನ್ನೂ ಅಮೆರಿಕ ಹೇಳಿದ ಹಾಗೆ ಕೇಳುವುದು, ತಿರಂಗಾ ಯಾತ್ರೆ ಮಾಡೋದಷ್ಟೇನಾ? ನಮ್ಮ ವಿದೇಶಾಂಗ ನೀತಿಗೆ ಯಾರು ಇನ್‌ಚಾರ್ಜ್? ನಮ್ಮ ನೀತಿ ಬಗ್ಗೆ ನಮ್ಮ ಪ್ರಧಾನಿಗಳು ಹೇಳಬೇಕು. ಇದನ್ನ ತೀರ್ಮಾನ ಮಾಡೋಕೆ ಟ್ರಂಪ್ ಯಾರು? ಆದರೂ ಪದೇ ಪದೇ ಮಾತಾಡ್ತಿದ್ದಾರೆ. ಮೋದಿ ಯಾಕೆ ಮಾತಾಡ್ತಿಲ್ಲ. ಸರ್ವಪಕ್ಷ ಸಭೆಗೆ ಬರುವುದಿಲ್ಲ. ಸಂಸತ್ ಅಧಿವೇಶನ ಕರೆಯರಿ ಅಂದರೆ ಕರೆಯುವುದಿಲ್ಲ. ಯುದ್ಧ ಆಗುವ ಸಮಯದಲ್ಲಿ ಆರ್‌ಎಸ್‌ಎಸ್ ಅವರಿಗೆ ಬ್ರಿಫಿಂಗ್ ಕೊಡ್ತಾರೆ. ಆರ್‌ಎಸ್‌ಎಸ್‌ಗೂ ಇದಕ್ಕೂ ಏನು ಸಂಬಂಧ? ಅವರು ಯಾರು? ಕಿಡಿಕಾರಿದ್ದಾರೆ.

 


Spread the love

LEAVE A REPLY

Please enter your comment!
Please enter your name here