ಕೋಲಾರ: ಹೃದಯಾಘಾತದಿಂದ KSRTC ನೌಕರ ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ ಜರುಗಿದೆ. 53 ವರ್ಷದ ಬಾಬಾಜಾನ್ ಮೃತ KSRTC ನೌಕರ.
ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತಕಪಲ್ಲಿ ಗ್ರಾಮದ ನಿವಾಸಿ ಬಾಬಾಜಾನ್ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಚಾಲಕರಾಗಿ ಕೆಲಸಕ್ಕೆ ಸೇರಿದ್ದ ಬಾಬಾಜಾನ್ ಅಪಘಾತದಲ್ಲಿ ಕಾಲಿಗೆ ಪೆಟ್ಟಾದ ಕಾರಣ ಘಟಕದಲ್ಲಿ ಕೆಲಸ ಮಾಡುತ್ತಿದ್ದರು.
ಭಾನುವಾರ ಕೂಡ ಕರ್ತವ್ಯ ನಿಭಾಯಿಸಿ ಮನೆಗೆ ತೆರಳಿದ್ದರು. ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಬಾಬಾಜಾನ್ ಮೃತಪಟ್ಟಿದ್ದಾರೆ. ಕಾರ್ಮಿಕ ಕಲ್ಯಾಣಾಧಿಕಾರಿ ನಾಗರಾಜ್, ಘಟಕ ವ್ಯವಸ್ಥಾಪಕ ವೆಂಕಟೇಶ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ



