ಬೆಂಗಳೂರು:- ಹೃದಯಾಘಾತದಿಂದ ನವಗ್ರಹ ಸಿನಿಮಾ ಖ್ಯಾತಿಯ ನಟ ಗಿರಿ ದಿನೇಶ್ ನಿಧನರಾಗಿದ್ದಾರೆ.
Advertisement
45 ವರ್ಷದ ಗಿರಿ ದಿನೇಶ್ ಅವರಿಗೆ ನಿನ್ನೆ ಸಂಜೆ ಪೂಜೆ ಮಾಡುವ ವೇಳೆ ದಿಢೀರ್ ಹಾರ್ಟ್ ಅಟ್ಯಾಕ್ ಆಗಿದೆ. ಹೃದಯಾಘಾತ ಆಗುತ್ತಿದ್ದಂತೆ ಮನೆಯಲ್ಲೇ ಗಿರಿ ಅವರು ಕುಸಿದು ಬಿದ್ದಿದ್ದರು. ಈ ಕೂಡಲೇ ಇವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲು ಮುಂದಾದರು. ಆದರೆ, ದಾರಿ ಮಧ್ಯೆಯೇ ಇವರು ಜೀವಬಿಟ್ಟಿದ್ದಾರೆ.
ಇನ್ನು, ಗಿರಿ ಅವರಿಗೆ ವಿವಾಹ ಆಗಿರಲಿಲ್ಲ. ಚಮಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರ ನಿಭಾಯಿಸಿದ್ದರು. ಇವರು ನಟ ದರ್ಶನ್ ಅವರಿಗೆ ಬಹಳ ಆಪ್ತರು ಎನ್ನಲಾಗಿದೆ.