ವಿಜಯನಗರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಿಪ್ಪಾಪುರ ಗ್ರಾಮದಲ್ಲಿ ನಡೆಡಿದೆ.
ಡಿ. ಶಿವಮ್ಮ( 24) ಮೂರು ವರ್ಷದ ದುರ್ಗಮ್ಮ, 10 ತಿಂಗಳ ಈಶ್ವರಿ ಮೃತ ದುರ್ದೈವಿಗಳಾಗಿದ್ದು,
ಇಬ್ಬರು ಮಕ್ಕಳನ್ಮು ನೇಣುಹಾಕಿ, ತಾಯಿಯೂ ಕೂಡ ನೇಣಿಗೆ ಶರಣಾಗಿದ್ದಾರೆ.
ಕೌಟುಂಬಿಕ ಕಲಹ ಶಂಕೆಯಾಗಿದ್ದು, ಕೆಲ ಕುಟುಂಬ ಸದಸ್ಯರು ತಲೆಮರೆಸಿಕೊಂಡಿದ್ದಾರೆ. ಇನ್ನೂ ಹೂವಿನ ಹಡಗಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



