ಹುಬ್ಬಳ್ಳಿ: ದೇಶದಲ್ಲಿ ಯುಪಿಎ ಕಾಲದಲ್ಲಿ ಯಾವ ರೀತಿ ಭ್ರಷ್ಟಾಚಾರ ಆಗಿತ್ತೋ ಅದೇ ರೀತಿ ಇಲ್ಲೂ ಸೀರಿಸ್ ಸ್ಕ್ಯಾಮ್ ನಡದಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,
ದೇಶದಲ್ಲಿ ಯುಪಿಎ ಕಾಲದಲ್ಲಿ ಯಾವ ರೀತಿ ಭ್ರಷ್ಟಾಚಾರ ಆಗಿತ್ತೋ ಅದೇ ರೀತಿ ಇಲ್ಲೂ ಸೀರಿಸ್ ಸ್ಕ್ಯಾಮ್ ನಡದಿವೆ. ಇದು ನಾಚಿಕೆ ಮಾನ ಮರ್ಯಾದೆ ಇರಲಾರದ ಸರ್ಕಾರ. ಗಣೇಶ ಕೂರಿಸಿದವರನ್ನು A1 ಆರೋಪಿ ಮಾಡಿದ್ದಾರೆ. ಅಲ್ಲಿನ SP ಗೆ ಮಾನ ಮರ್ಯಾದೆ ಇದೆಯಾ.? ಗೃಹ ಸಚಿವರಿಗೆ ಏನಾಗಿದೆ ಎಂದ ಜೋಶಿ ಕಿಡಿ ಕಾರಿದರು.
ಇನ್ನೂ ಕಾಂಗ್ರೆಸ್ ಸರ್ಕಾರ ಬಂದಾಗ ದೇಶ ದ್ರೋಹ ಕೃತ್ಯಗಳು ಸರ್ವೇ ಸಾಮಾನ್ಯವಾಗಿದೆ. ಗಣಪತಿ ಪ್ರತಿಷ್ಠಾಪನೆ ಮಾಡಿದವರನ್ನು ಎ-1 ಆರೋಪಿ ಮಾಡಿದ್ದು, ಎಸ್.ಪಿ ಗೆ ಹಾಗೂ ಗೃಹ ಸಚಿವರಿಗೆ ನಾಚಿಕೆ ಮಾನ ಮರ್ಯಾದೆಯೇ ಇಲ್ಲವಾಗಿದ್ದು, ರಾಜ್ಯವನ್ನು ಪಾಕಿಸ್ತಾನ ಮಾಡಿದ್ದೀರಾ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.









