ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ

0
Hemareddy Mallamma Jayantyutsava
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಟ್ಟೂರ ಗ್ರಾಮದಲ್ಲಿ ಶನಿವಾರ ರೆಡ್ಡಿ ಸಮುದಾಯವರು ಗ್ರಾಮದ ಇತರೇ ಸಮಾಜದವರೊಡಗೂಡಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಆಚರಿಸಿದರು.

Advertisement

ಎತ್ತಿನ ಬಂಡಿ ಮೆರವಣಿಗೆಯಲ್ಲಿ ವಾದ್ಯಮೇಳ, ಮಹಿಳೆಯರ ಪೂರ್ಣಕುಂಭ ಆಚರಣೆಗೆ ಮೆರುಗು ತಂದಿತು.

ಈ ವೇಳೆ ಮಾತನಾಡಿದ ಹಿರಿಯರಾದ ಬಸನಗೌಡ್ರ ಪಾಟೀಲ, ಮಹಾಶಿವಶರಣೆಯಾಗಿ ಬೆಳಗಿದ ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲದ ಅನರ್ಘ್ಯರತ್ನವಾಗಿ ಮಲ್ಲಮ್ಮಳ ಹೆಸರು ಶಾಶ್ವತವಾಗಿರುತ್ತದೆ. ಅವಳ ಜೀವನಾದರ್ಶಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಇಂತಹ ಶ್ರೇಷ್ಠ ಶಿವಶರಣೆ ಸದಾ ಸ್ಮರಣೀಯ ಎಂದರು.

ಈ ವೇಳೆ ಚಂದ್ರಶೇಖರಪ್ಪ ಕರಿನಾಗಣ್ಣವರ, ನಾಗಪ್ಪ ದಾನಿ, ಮಹಾದೇವಪ್ಪ ಉಡಚಗೊಂಡ, ಬಸವರಾಜ ಮೇಟಿ, ಸೋಮಪ್ಪ ಶಿರಹಟ್ಟಿ, ಗಿರೀಶ ಮೇಟಿ ಸೇರಿ ವಿವಿಧ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here