ಕೋಲಾರ : ಜಿಲೆಟಿನ್ ಕಡ್ಡಿ ಬಳಸಿ ಕಲ್ಲುಬಂಡೆ ಸ್ಫೋಟ ವೇಳೆ ಗುಡ್ಡ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಹುಣಸಿಕೋಟೆ ಗ್ರಾಮದಲ್ಲಿ ಜರುಗಿದೆ.
Advertisement
ಕಲ್ಲು ಕುಟಿಗ ಮಂಜುನಾಥ್ (40) ಸಾವನ್ನಪ್ಪಿದ ವ್ಯಕ್ತಿ. ಘಟನೆಯಲ್ಲಿ ಮತ್ತೊಬ್ಬ ಆಂಧ್ರ ಮೂಲದ ಕಾರ್ಮಿಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ಜರುಗಿದೆ. ಗ್ರಾಮದ ಬೆಟ್ಟದ ಬಳಿ ಕಲ್ಲು ಸ್ಫೋಟಿಸುವ ವೇಳೆ ಘಟನೆ ಜರುಗಿದೆ.
ಗುಡ್ಡ ಕುಸಿದು ಕಲ್ಲು ಬಂಡೆ ಕೆಳಗೆ ಸಿಲುಕಿ ಮಂಜುನಾಥ್ ಸಾವನ್ನಪ್ಪಿದ್ದಾರೆ. ಶವವನ್ನು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಗಂಭೀರ ಗಾಯಗೊಂಡಿರುವ ನವೀನ್ ಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದೆ.