ವಿಜಯಸಾಕ್ಷಿ ಸುದ್ದಿ, ಗದಗ : ಅನೇಕ ಹಿರಿಯರ, ಮಹಾತ್ಮರ ತ್ಯಾಗ ಮತ್ತು ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಕಳೆದ 78 ವರ್ಷಗಳಲ್ಲಿ ನಮ್ಮ ದೇಶ ಬಹಳಷ್ಟು ಅಭಿವೃದ್ಧಿಯನ್ನು ಸಾಧಿಸಿದೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.
ತೋಂಟದಾರ್ಯ ಸಂಸ್ಥಾನಮಠದಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ, ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿರುವ ಮಹಾನ್ ವ್ಯಕ್ತಿಗಳನ್ನು, ತ್ಯಾಗಿಗಳನ್ನು, ವೀರರನ್ನು, ಧೀರರನ್ನು, ಸ್ವಾತಂತ್ರ್ಯ ಯೋಧರನ್ನು ಸ್ಮರಿಸಿಕೊಳ್ಳಬೇಕು. ಮಹಾತ್ಮಾ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿಕೊಂಡಿದ್ದರು. ಗಾಂಧಿಜಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದ್ದರು. ಸತ್ಯ ಮತ್ತು ಅಹಿಂಸೆ ಎರಡೂ ಅತ್ಯಮೂಲ್ಯ ಮೌಲ್ಯಗಳು ಎಂದು ಶ್ರೀಗಳು ನುಡಿದರು.
ಬಸವೇಶ್ವರ ಶಾಲೆಯ ಮಕ್ಕಳಿಂದ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ಜರುಗಿತು. ದಾಸೋಹ ಭಕ್ತಿಸೇವೆಯನ್ನು ಸಿದ್ಧಲಿಂಗೇಶ ಮತ್ತು ವೀರೇಶ ಸವಡಿ ವಹಿಸಿಕೊಂಡಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ ಮತ್ತು ಪದಾಧಿಕಾರಿಗಳು, ಗಿರಿಜಕ್ಕ ಧರ್ಮರೆಡ್ಡಿ, ಕರಿಗೌಡರ, ಅಮರೇಶ ಅಂಗಡಿ, ಶ್ರೀಮಠದ ಮ್ಯಾನೇಜರ್ ಮಲ್ಲಿಕಾರ್ಜುನ ಅಂಗಡಿ, ಶೇಖಣ್ಣ ಕವಳಿಕಾಯಿ, ದಾನಯ್ಯ ಗಣಾಚಾರಿ ಸೇರಿದಂತೆ ಶ್ರೀಮಠದ ಭಕ್ತರು ಹಾಜರಿದ್ದರು.