ಹೊಳಲಮ್ಮದೇವಿ ರಥೋತ್ಸವ

0
holalamma
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಿನ ಶಕ್ತಿದೇವತೆ ದೇವಿಹಾಳ ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿಯ ಮಹಾರಥೋತ್ಸವವು ಭಾರತ ಹುಣ್ಣಿಮೆಯ ದಿನವಾದ ಫೆ.೨೪ರ ಸಂಜೆ ೫ ಗಂಟೆಗೆ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು.

Advertisement

ಶನಿವಾರ ಬೆಳಿಗ್ಗೆ ಪ್ರಾತಃಕಾಲದಲ್ಲಿ ದೇವಿಗೆ ಉಡಿ ತುಂಬುವುದು ಸೇರಿದಂತೆ ವಿವಿಧ ಪೂಜೆ-ಪುನಸ್ಕಾರಗಳು ನಡೆದವು. ಸಂಜೆ ೫ರ ಸುಮಾರಿಗೆ ಉತ್ಸವ ಮೂರ್ತಿಯ ಸಮೇತ ಮಹಾರಥೋತ್ಸವವು ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ್ದಂತಹ ಸಾವಿರಾರು ಭಕ್ತರು ದೇವಿಗೆ ಉತ್ತತ್ತಿ, ಬಾಳೆಹಣ್ಣುಗಳನ್ನು ಅರ್ಪಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಮೆರವಣಿಗೆಯಲ್ಲಿ ಗಜರಾಜ ಸಮೇತ, ಡೊಳ್ಳಿನ ಮಜಲು, ಝಾಂಜಮೇಳ, ಕಹಳೆ ಸೇರಿದಂತೆ ವಿವಿಧ ವಾದ್ಯಗೋಷ್ಠಿಗಳು ಸಾಥ್ ನೀಡಿದವು.


Spread the love

LEAVE A REPLY

Please enter your comment!
Please enter your name here