ವಿಜಯಪುರ:- ಹನಿಟ್ರ‍್ಯಾಪ್ ಬಹಳ ಹೀನಾಯವಾದ ಕೆಲಸ, ಯಾರನ್ನೇ ಆಗಲಿ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
Advertisement
ಈ ಸಂಬಂಧ ಮಾತನಾಡಿದ ಅವರು, ಸಚಿವ ರಾಜಣ್ಣ ಅವರ ಹನಿಟ್ರ‍್ಯಾಪ್ ವಿಷಯದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಅವರು ಸಿಎಂ ಹಾಗೂ ಗೃಹಮಂತ್ರಿಗಳಿಗೆ ತಮಗೆ ಏನಾಗಿದೆ ಎನ್ನುವುದನ್ನು ತಿಳಿಸಿದ್ದಾರೆ. ಈ ರೀತಿ ರಾಜಕೀಯವಾಗಿ ಯಾರೇ ಮಾಡಿದರೂ ಅದು ತಪ್ಪು. ತೇಜೋವಧೆ ಮಾಡುವಂತಹದು ತಪ್ಪು, ಇದು ಬಹಳ ಹೀನಾಯವಾದ ಕೆಲಸ. ಹೀಗಾಗಿ ಇದನ್ನು ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ? ಎಂದು ತನಿಖೆಯಾಗಬೇಕು. ಸಿಎಂ ಹಾಗೂ ಗೃಹಮಂತ್ರಿಗಳು ಅದರ ಬಗ್ಗೆ ಗಮನ ಹರಿಸುತ್ತಾರೆ ಎಂದು ಹೇಳಿದ್ದಾರೆ.