ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಉತ್ತಮ ಸಂಸ್ಕಾರವಂತ ಮಕ್ಕಳು ಈ ನಾಡಿಗೆ ಆಸ್ತಿಯಾಗುತ್ತಾರೆ. ಮಕ್ಕಳಿಗೆ ಸಂಸ್ಕಾರ, ಸಂಬಂಧ ಮತ್ತು ಉತ್ತಮ ಶಿಕ್ಷಣ ದೊರಕಿಸಬೇಕು. ಪ್ರತಿಭೆ ಎಲ್ಲರಲ್ಲಿಯೂ ಇದ್ದು, ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಆಯಾ ಸಮಾಜಗಳು ಮಾಡಿದಲ್ಲಿ ಹೆಚ್ಚಿನ ಸಾಧನೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಧಾರವಾಡದ ಮಾನ್ಸುರ ರೇವಣಶಿದ್ದೇಶ್ವರ ಮಹಾಮಠದ ಶ್ರೀ ಬಸವರಾಜ ದೇವರು ನುಡಿದರು.
ಅವರು ಪಟ್ಟಣದ ಚನ್ನಮ್ಮನವನ ಕಲ್ಯಾಣಮಂಟಪದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರತಿಭೆ ಯಾರ ಸ್ವತ್ತೂ ಅಲ್ಲ ಮತ್ತು ಅದಕ್ಕೆ ಯಾವುದೇ ಜಾತಿ-ಧರ್ಮದ ಹಂಗಿಲ್ಲ. ಅದು ಸಾಧಕರ ಸ್ವತ್ತಾಗಿದೆ. ಮಕ್ಕಳು ಸಾಧನೆ ಮಾಡಬೇಕೆನ್ನುವ ಹಂಬಲ ಹೊಂದಿರುತ್ತಾರೆ, ಆದರೆ ಅದಕ್ಕೆ ತಕ್ಕಂತೆ ಅವಕಾಶಗಳ ಕೊರತೆ ಇರುತ್ತದೆ. ಅವರಿಗೆ ಪ್ರೊತ್ಸಾಹ ನೀಡಿ ಸಾಧನೆ ಮಾಡುವಂತೆ ಮಾಡಬೇಕು ಎಂದು ಕರೆ ನೀಡಿದರು.
ಹುಲ್ಲೂರ ಅಮೋಘಿಮಠದ ಸಿದ್ದಯ್ಯ ಅಮೋಘಿಮಠ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಶೇಖಣ್ಣ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಮಂಜುನಾಥ ಕೊಕ್ಕರಗುಂದಿ ಉಪನ್ಯಾಸ ನೀಡಿದರು. ಸಭೆಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವಿರೂಪಾಕ್ಷಪ್ಪ ಪಡಗೇರಿ, ವೀರೇಂದ್ರಗೌಡ ಪಾಟೀಲ್, ಹಾಲಪ್ಪ ಹಳ್ಳಿಕೇರಿ, ಶಿವಣ್ಣ ಕುರಿ, ಬಸವರಾಜ ಹೊಳಲಾಪುರ, ನೀಲಪ್ಪ ಶರಸೂರಿ, ಮುದಕಣ್ಣ ಗದ್ದಿ, ಅಮರಪ್ಪ ಗುಡಗುಂಟಿ, ಹರೀಶ ಲಕ್ಷ್ಮೇಶ್ವರ, ಭಾಗ್ಯಶ್ರೀ ಬಾಬಣ್ಣ, ಮಂಜುನಾಥ ಘಂಟಿ, ಫಕ್ಕೀರೇಶ ಮ್ಯಾಟಣ್ಣವರ, ಛಾಯಪ್ಪ ಬಸಾಪುರ, ನಿಂಗಪ್ಪ ಗುಡ್ಡಣ್ಣನವರ, ನೀಲಪ್ಪ ಪೂಜಾರ, ನೀಲಪ್ಪ ಪಡಗೇರಿ, ಲೆಂಕೆಪ್ಪ ಶೇರಸೂರಿ, ಯಲ್ಲವ್ವ ದುರಗಣ್ಣನವರ, ಕವಿತಾ ಶೇರಸೂರಿ, ಗಂಗಮ್ಮ ಗದ್ದಿ, ತಿಪ್ಪಣ್ಣ ಸಂಶಿ, ಫಕ್ಕೀರೇಶ ಮ್ಯಾಟಣ್ಣನವರ, ಜಾನಪದ ಕಲಾವಿದ ಶಿದ್ದಯ್ಯ ಹಳ್ಳಿಕೇರಿಮಠ, ಬಸವರಾಜ ಸಂಶಿ, ಅಣ್ಣಪ್ಪ ರಾಮಗೇರಿ, ಹಾಲಮತ ಸಮಾಜ ಬಾಂದವರು ಇದ್ದರು. ಸಂಘದ ಕಾರ್ಯದರ್ಶಿ ಯಲ್ಲಪ್ಪ ಸೂರಣಗಿ ಸ್ವಾಗತಿಸಿದರು. ಎಸ್.ಎನ್. ತಾಯಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎನ್. ಸಾವಿರಕುರಿ ನಿರೂಪಿಸಿದರು. ನೀಲಪ್ಪ ಪಡಗೇರಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಉದ್ಘಾಟಿಸಿ ಮಾತನಾಡಿ, ಯಾವುದೇ ಸಮಾಜವಿರಲಿ ಅದಕ್ಕೆ ತನ್ನ ಆದ ಸಂಸ್ಕಾರ, ಪದ್ಧತಿ, ಬೆಲೆ ಇರುತ್ತದೆ. ಎಲ್ಲ ಸಮಾಜಗಳು ಇಲ್ಲಿ ಶ್ರೇಷ್ಠವಾಗಿದ್ದು, ಅದರಲ್ಲಿ ಹಾಲಮತ ಸಮಾಜ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಎಲ್ಲ ಸಮಾಜಗಳೊಂದಿಗೆ ಕೂಡಿ ಬಾಳುವ, ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಸಮಾಜ ಇದಾಗಿದೆ.
ಇದೀಗ ಸಮಾಜದಲ್ಲಿನ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಿರುವದು ಉತ್ತಮ ಕಾರ್ಯ. ಇದೇ ರೀತಿ ಎಲ್ಲ ರಂಗಗಳಲ್ಲಿ ಸಮಾಜದವರು ಸಾಧನೆ ಮಾಡುತ್ತಿದ್ದು, ಇನ್ನೂ ಹೆಚ್ಚಿನ ಶ್ರೇಯಸ್ಸು ಪಡೆಯಲಿ ಎಂದು ಹೇಳಿದರು.