ತುಮಕೂರು;- ಜಿಲ್ಲೆಯಲ್ಲಿ ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ. ಘಟನೆಯಲ್ಲಿ ಮತ್ತೋರ್ವನಿಗೆ ಗಾಯವೀಗಿದ್ದು, ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಭರತ್ ಕುಮಾರ್ 25 ಅಭಿಲಾಷ್ 26 ಮೃತ ದುರ್ದೈವಿ ಗಳು. ಒಟ್ಟು ಮೂವರು ಯುವಕರು ಬೈಕ್ ನಲ್ಲಿ ಮಧುಗಿರಿ ಕಡೆ ಬರುತ್ತಿದ್ದರು. ಮಧುಗಿರಿ ಕಡೆಯಿಂದ ಪಾವಗಡ ಕಡೆ ಹೋಗ್ತಿದ್ದ ಕಾರಿಗೆ ಬೈಕ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಮೂವರು ಮಧುಗಿರಿ ತಾಲೂಕಿನ ನಲ್ಲೆಕಾಮನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



