ಬೆಂಗಳೂರು;- ಕುಣಿಗಲ್ ಶಾಸಕ ಡಾ ರಂಗನಾಥ್ ಅವರು ಮಂಡಿ ನೋವಿನಿಂದ ಬಳಲುತ್ತಿದ್ದ ಮಹಿಳ ಕ್ರೀಡಾಪಟು ಬಾಳಿಗೆ ಬೆಳಕಾಗಿದ್ದಾರೆ, ಕುದ್ದು ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕುಣಿಗಲ್ ನಿವಾಸಿ ರಗ್ಬಿ ಆಟಗಾರ್ತಿ ಭವ್ಯ ಗೆ ಮಂಡಿ ನೋವಿನ ಚಿಕಿತ್ಸೆ ಪಡೆದಿದ್ದಾರೆ. ಬಡತನ ಹಿನ್ನೆಲೆ ಶಸ್ತ್ರಚಿಕಿತ್ಸೆಗೆ ಹಣ ಇಲ್ಲದೆ ಕುಟುಂಬ ಸಂಕಷ್ಟದಲ್ಲಿತ್ತು. ಮಂಡಿ ನೋವಿನಿಂದ ಬಳಲುತ್ತಿದ್ದ ಭವ್ಯಗೆ ಸ್ಥಿತಿ ಬಗ್ಗೆ ಶಾಸಕರ ಗಮನಕ್ಕೆ ಬಂದ ಹಿನ್ನಲೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಸ್ವತಃ ಶಾಸಕ ಡಾ ರಂಗನಾಥ್ ರಿಂದಲೇ ಶಸ್ತ್ರಚಿಕಿತ್ಸೆ ನಡೆದಿದೆ.
ರಂಗನಾಥ್ ತಂಡದ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದ್ದು, ಈ ಹಿಂದೆ ತನ್ನ ಕ್ಷೇತ್ರದ ಮೂವರಿಗೆ ಶಸ್ತ್ರಚಿಕಿತ್ಸೆ ಮಾಡಿ ರಂಗನಾಥ್ ಅವರು ಸ್ಪೂರ್ತಿ ಆಗಿದ್ದರು. ಶಾಸಕ ಡಾ ರಂಗನಾಥ್ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.



