ಮಂಡ್ಯ: ಭೀಕರ ರಸ್ತೆ ಅಪಘಾತ ಸಂಭವಿಸಿ ಯುವಕರಿಬ್ಬರ ದೇಹ ಛಿದ್ರ ಛಿದ್ರವಾಗಿರುವ ಘಟನೆ ಮಂಡ್ಯದ ಬೆಂ-ಮೈ ಹೆದ್ದಾರಿಯ ಸರ್ಕಾರಿ ಮಹಿಳಾ ಕಾಲೇಜು ಬಳಿ ನಡೆದಿದೆ.
Advertisement
ಮಂಡ್ಯದ ಉದಯಗಿರಿ ಹಾಗೂ ಯತ್ತಗದಹಳ್ಳಿಯ ಡ್ಯಾನಿಲ್(20) ಜೋಶ್ ಆ್ಯಲ್ಡ್ಸ್ ( 20) ಮೃತ ಯುವಕರಾಗಿದ್ದು, ಬೆಂಗಳೂರಿನಿಂದ ಮಂಡ್ಯಕ್ಕೆ ಯುವಕರು ಬೈಕ್ ನಲ್ಲಿ ಬರುತ್ತಿದ ವೇಳೆ ಬೆಂ-ಮೈ ಹೆದ್ದಾರಿಯಲ್ಲಿದ್ದ ಸ್ಕೈವಾಕ್ ಕಂಬಕ್ಕೆ ರಭಸವಾಗಿ ಬೈಕ್ ಡಿಕ್ಕಿ ಹೊಡೆದು ಈ ಅಫಘಾತ ಸಂಭವಿಸಿದೆ.
ಡಿಕ್ಕಿ ರಭಸಕ್ಕೆ ಯುವಕರ ದೇಹ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಮಂಡ್ಯ ಮಿಮ್ಸ್ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.