HomeCrime Newsಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ: ಯುವಕರಿಬ್ಬರ ದೇಹ ಛಿದ್ರ ಛಿದ್ರ.!

ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ: ಯುವಕರಿಬ್ಬರ ದೇಹ ಛಿದ್ರ ಛಿದ್ರ.!

For Dai;y Updates Join Our whatsapp Group

ಮಂಡ್ಯ: ಭೀಕರ ರಸ್ತೆ ಅಪಘಾತ ಸಂಭವಿಸಿ ಯುವಕರಿಬ್ಬರ ದೇಹ ಛಿದ್ರ ಛಿದ್ರವಾಗಿರುವ ಘಟನೆ ಮಂಡ್ಯದ ಬೆಂ-ಮೈ ಹೆದ್ದಾರಿಯ ಸರ್ಕಾರಿ ಮಹಿಳಾ ಕಾಲೇಜು ಬಳಿ ನಡೆದಿದೆ.

ಮಂಡ್ಯದ ಉದಯಗಿರಿ ಹಾಗೂ ಯತ್ತಗದಹಳ್ಳಿಯ ಡ್ಯಾನಿಲ್(20) ಜೋಶ್ ಆ್ಯಲ್ಡ್ಸ್ ( 20) ಮೃತ ಯುವಕರಾಗಿದ್ದು, ಬೆಂಗಳೂರಿನಿಂದ ಮಂಡ್ಯಕ್ಕೆ ಯುವಕರು ಬೈಕ್ ನಲ್ಲಿ ಬರುತ್ತಿದ ವೇಳೆ ಬೆಂ-ಮೈ ಹೆದ್ದಾರಿಯಲ್ಲಿದ್ದ ಸ್ಕೈವಾಕ್ ಕಂಬಕ್ಕೆ ರಭಸವಾಗಿ ಬೈಕ್ ಡಿಕ್ಕಿ ಹೊಡೆದು ಈ ಅಫಘಾತ ಸಂಭವಿಸಿದೆ.

ಡಿಕ್ಕಿ ರಭಸಕ್ಕೆ ಯುವಕರ ದೇಹ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಮಂಡ್ಯ ಮಿಮ್ಸ್ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img