ಯಾದಗಿರಿ: ಯಾದಗಿರಿಯಲ್ಲಿ ಘೋರ ದುರಂತ ಸಂಭವಿಸಿದ್ದು, KSRTC ಬಸ್ ಹರಿದು 2 ವರ್ಷದ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ಪರಸಪ್ಪ ಹುಣಸ್ಯಾಳ ಅವರ ಪುತ್ರಿ ಲಕ್ಷ್ಮೀ ಎಂದು ಗುರುತಿಸಲಾಗಿದೆ. ಕೂಡಲಗಿ ಗ್ರಾಮದಿಂದ ಸುರಪುರಕ್ಕೆ ಹೊರಟಿದ್ದ KA 33 F0346 ಬಸ್ ನ ಚಕ್ರಗಳು ಮಗುವಿನ ಮೇಲೆ ಹರಿದಿದ್ದು,
ದೇಹ ಛಿದ್ರಗೊಂಡಿದೆ. ಸ್ಥಳದಲ್ಲಿ ಮಗುವಿನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



