ಬೆಂಗಳೂರು:– ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿಯ ವಿರುದ್ಧ ಕೊಲೆ ಆರೋಪ ಕೇಳಿಬಂದಿರುವ ಘಟನೆ ನಗರದ ಆಡುಗೋಡಿಯ ನಂಜಪ್ಪ ಲೇಔಟ್‍ನಲ್ಲಿ ಜರುಗಿದೆ.
Advertisement
44 ವರ್ಷದ ಹೇಮಾ ಮೃತ ಮಹಿಳೆ.ಪತಿಗೆ ಅಕ್ರಮ ಸಂಬಂಧ ಇದೆ, ಮನೆ ಸಮೀಪವೇ ಬೇರೆ ಮಹಿಳೆಗೂ ಮನೆ ಮಾಡಿಕೊಟ್ಟಿದ್ದ ಎಂದು ಮಹಿಳೆ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳಂತೆ. ಇನ್ನೂ ಜನವರಿಯಲ್ಲಿ ಹೇಮಾ ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದಳಂತೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಗೆ ಪೊಲೀಸರು ಕಾಯುತ್ತಿದ್ದಾರೆ.