ಮಂಡ್ಯ:- ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವನ್ನಪ್ಪಿದ್ದು, ಗಂಡನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಘಟನೆ ಜರುಗಿದೆ.
Advertisement
21 ವರ್ಷದ ಸ್ವಾತಿ ಮೃತ ಗೃಹಿಣಿ ಎನ್ನಲಾಗಿದೆ. ಮೃತ ಗೃಹಿಣಿ ಪೋಷಕರು ಗಂಡನ ಮನೆಯವರ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ. ಘಟನೆ ಬಳಿಕ ಮನೆಯಿಂದ ಗಂಡ ಹಾಗು ಆತನ ಪೋಷಕರು ಎಸ್ಕೇಪ್ ಆಗಿದ್ದು, ಮತ್ತಷ್ಟು ಅನುಮಾನ ಬರುವಂತೆ ಮಾಡಿದೆ.
ಸಾವಿನಿಂದ ಮನನೊಂದು ಮೃತ ಗೃಹಿಣಿ ಕಡೆಯವರಿಂದ ಗಂಡನ ಮನೆ ಮೇಲೆ ದಾಂಧಲೆ ನಡೆಸಿ ಮನೆಯ ಪೀಠೋಪಕರಣ ಧ್ವಂಸ ಮಾಡಲಾಗಿದೆ. ಘಟನೆ ಬಳಿಕ ಗಂಡ ಮೋಹನ್ ಹಾಗು ಆತನ ಪೋಷಕರು ಮನೆಯಿಂದ ನಾಪತ್ತೆ ಆಗಿದ್ದು, ಸ್ಥಳಕ್ಕೆ ಕಿಕ್ಕೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಾಪತ್ತೆಯಾಗಿರುವ ಗಂಡ ಹಾಗೂ ಅವನ ಮನೆಯವರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.