ವಿಜಯಸಾಕ್ಷಿ ಸುದ್ದಿ, ರೋಣ : ಪಟ್ಟಣದಲ್ಲಿ ಶನಿವಾರ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಶಾಸಕ ಜಿ.ಎಸ್. ಪಾಟೀಲ ನೇತೃತ್ವದಲ್ಲಿ ಬೃಹತ್ ರೋಡ್ ಶೋ ಕಾರ್ಯಕ್ರಮ ನಡೆಯಿತು.
ಪಟ್ಟಣದ ಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿ, ಕಾಂಗ್ರೆಸ್ ಪಕ್ಷದ ಪರವಾಗಿ ಜಯಘೋಷಗಳನ್ನು ಕೂಗಿ, ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ಮತಯಾಚನೆ ಮಾಡಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯ ಸೇರಿದಂತೆ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತದಾರರ ಅಲೆ ಆರಂಭವಾಗಿರುವುದು ಈಗಾಗಲೇ ಸಾಬೀತಾಗಿದೆ ಎಂದರು.
ರೋಡ್ ಶೋ ಸಂದರ್ಭದಲ್ಲಿ ಪಟ್ಟಣದ ಮಹಿಳೆಯರು ಶಾಸಕ ಜಿ.ಎಸ್. ಪಾಟೀಲ ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರಿಗೆ ಅಭೂತಪೂರ್ವ ಸ್ವಾತಗ ಕೋರಿದರು. ಐ.ಎಸ್. ಪಾಟೀಲ, ಸಂಗನಗೌಡ ಪಾಟೀಲ, ವೀರಣ್ಣ ಶೆಟ್ಟರ್, ಬಾವಾಸಾಬ ಬೆಟಗೇರಿ, ಸಿದ್ದಣ್ಣ ಬಂಡಿ, ವ್ಹಿ.ಬಿ. ಸೋಮನಕಟ್ಟಿಮಠ, ಅಕ್ಷಯ ಪಾಟೀಲ, ಪ್ರಭು ಮೇಟಿ, ಯೂಸುಪ್ ಇಟಗಿ, ಶಫೀಕ ಮೂಗನೂರ, ಗದಿಗೇಪ್ಪ ಕಿರೇಸೂರ, ಇಸ್ಮಾಯಿಲ್ ಹೊರಪೇಟಿ, ಶಿವು ಹುಲ್ಲೂರ, ಆನಂದ ಚಂಗಳಿ, ಮೌನೇಶ ಹಾದಿಮನಿ, ದಾವಲ ಬಾಡಿನ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.