ವಿಜಯಪುರ: ರಾಜ್ಯದಲ್ಲಿ ಘೋರ ಘಟನೆ ನಡೆದಿದ್ದು, ಪತಿಯೊಬ್ಬ ಹಾಡಹಗಲೇ ನಡು ರಸ್ತೆಯಲ್ಲೇ ಪತ್ನಿಯನ್ನು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಆನಂದ ಟಾಕೀಸ್ ಬಳಿ ಈ ಘಟನೆ ನಡೆದಿದ್ದು, ಸಿಂದಗಿ ತಾಲೂಕಿನ ಕೆರಟುಗಿ ಗ್ರಾಮದ ಯಮನಪ್ಪ ಮಾದರ್ (60) ಹಲ್ಲೆ ಮಾಡಿದ ಪತಿಯಾಗಿದ್ದು,
Advertisement
  
ಅನಸುಯಾ ಮಾದಾರ್ (50) ಹಲ್ಲೆಗೊಳಗಾದ ಪತ್ನಿಯಾಗಿದ್ದಾಳೆ. ಸಾರ್ವಜನಿಕರು ತಡೆಯಲು ಬಂದವರಿಗೆ ಯಮನಪ್ಪ ಅವಾಜ್ ಹಾಕಿ ಮನಬಂದಂತೆ ಮಚ್ಚಿನಿಂದ ದಾಳಿ ಮಾಡಿದ್ದಾನೆ.ಕೊನೆಗೆ ಸಾರ್ವಜನಿಕರು ಯಮನಪ್ಪನಿಗೆ ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆದು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಲ್ಲೆ ಮಾಡುವ ಭಯಾನಕ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಗಾಯಾಳು ಅನಸೂಯ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


