ರಿಯಾಲಿಟಿ ಶೋಗಾಗಿ ಗಂಡಸರ ಜೊತೆ ಬೆಡ್ ಹಂಚಿಕೊಳ್ಳುವ ಮಹಿಳೆ ನಾನಲ್ಲ: ಬಿಗ್‌ ಬಾಸ್‌ ಆಫರ್‌ ತಿರಸ್ಕರಿಸಿದ ನಟಿ ತನುಶ್ರೀ ದತ್ತಾ

0
Spread the love

ಬಾಲಿವುಡ್‌ ಚಿತ್ರರಂಗದ ಖ್ಯಾತ ನಟಿ ತನುಶ್ರೀ ದತ್ತ ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಯ ವಿಚಾರವಾಗಿಯೇ ಸದ್ದು ಮಾಡುತ್ತಿರುವ ನಟಿ ಇದೀಗ ಮತ್ತೊಂದು ಹೇಳಿಕೆ ಮೂಲಕ ವಿವಾದ ಸೃಷ್ಟಿಸಿದ್ದಾರೆ.

Advertisement

ತನುಶ್ರೀ ದತ್ತ ಅವರಿಗೆ ಬಿಗ್ ಬಾಸ್ ಶೋ ನಿಂದ ಆಫರ್‌ ಬಂದಿತ್ತು ಎನ್ನಲಾಗಿದೆ. ಆದರೆ ಅವರು ಆ ಅವಕಾಶವನ್ನು ತಿರಸ್ಕರಿಸಿದ್ದಾರೆ. ಅಲ್ಲದೇ ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ನಟಿ ವಿವರಿಸಿದ್ದಾರೆ.

ಹಿಂದಿ ಬಿಗ್‌ ಬಾಸ್‌ ಶೋನಲ್ಲಿ ಮಹಿಳಾ ಸ್ಪರ್ಧಿಗಳು ಮತ್ತು ಪುರುಷ ಸ್ಪರ್ಧಿಗಳು ಒಂದೇ ಹಾಸಿಗೆಯಲ್ಲಿ ಮಲಗಿದ ಉದಾಹರಣೆ ಇದೆ. ಇದೇ ಕಾರಣಕ್ಕೆ ತನುಶ್ರೀ ದತ್ತ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ತಿರಸ್ಕರಿಸಿದ್ದು, ‘ನಾನು ಅಷ್ಟು ಚೀಪ್ ಅಲ್ಲ’ ಎಂದಿದ್ದಾರೆ.

‘ಅಂತಹ ಕಾರ್ಯಕ್ರಮಕ್ಕೆ ನಾನು ಹೋಗುತ್ತೇನೆ ಎಂದು ನಿಮಗೆ ಅನಿಸುತ್ತ? ಅಂಥ ಜಾಗದಲ್ಲಿ ನಾನು ಇರಲಾರೆ. ಆ ರೀತಿ ನಾನು ನನ್ನ ಕುಟುಂಬದ ಜೊತೆಗೂ ಇರಲ್ಲ. ನನಗೆ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಎಂದಿಗೂ ಆಸಕ್ತಿ ಬಂದಿಲ್ಲ, ಬರುವುದೂ ಇಲ್ಲ. ಅವರು ನನಗೆ 1.65 ಕೋಟಿ ರೂಪಾಯಿ ಸಂಭಾವನೆ ಆಫರ್ ಮಾಡಿದ್ದರು. ನನ್ನ ಹಾಗೆ ಇರುವ ಇನ್ನೋರ್ವ ಸೆಲೆಬ್ರಿಟಿಗೂ ಅಷ್ಟೇ ಹಣ ನೀಡಿದರು’. ಬಿಗ್ ಬಾಸ್ ಕಾರ್ಯಕ್ರಮದ ಸ್ಟೈಲಿಸ್ಟ್ ಕಡೆಯಿಂದ ನನಗೆ ಕರೆ ಬಂದಿತ್ತು. ಅವರು ಮನವಿ ಮಾಡಿದರು. ನನ್ನ ಡಯೆಟ್ ನೋಡಿಕೊಳ್ಳುವುದಾಗಿಯೂ ಅವರು ಹೇಳಿದರು. ಏನೇ ಕೊಟ್ಟರು ನಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲ್ಲ ಅಂತ ಅವರಿಗೆ ಹೇಳಿದೆ’ ಎಂದು ತನುಶ್ರೀ ದತ್ತ ಹೇಳಿದ್ದಾರೆ.

‘ಗಂಡಸರು ಮತ್ತು ಹೆಂಗಸರು ಒಂದೇ ಕೋಣೆಯಲ್ಲಿ ಮಲಗುತ್ತಾರೆ. ಒಟ್ಟಿಗೆ ಫೈಟ್ ಮಾಡುತ್ತಾರೆ. ನಾನು ಅದನ್ನು ಮಾಡಲಾರೆ. ನನ್ನ ಡಯೆಟ್ ತುಂಬ ನಿಖರವಾಗಿದೆ. ಒಂದು ರಿಯಾಲಿಟಿ ಶೋಗಾಗಿ ಗಂಡಸರ ಜೊತೆ ಬೆಡ್ ಹಂಚಿಕೊಳ್ಳುವ ಮಹಿಳೆಯ ರೀತಿ ನಾನು ಕಾಣುತ್ತೇನಾ? ನಾನು ಅಷ್ಟು ಚೀಪ್ ಅಲ್ಲ. ನನ್ನ ಖಾಸಗಿತನ ಅಮೂಲ್ಯವಾದದ್ದು. ನನ್ನ ಪಾಡಿಗೆ ನೆಮ್ಮದಿಯಿಂದ ಕೆಲಸ ಮಾಡಲು ಬಿಟ್ಟರೆ ಅದಕ್ಕಿಂತ ಜಾಸ್ತಿ ಸಂಪಾದನೆ ಮಾಡುತ್ತೇನೆ ಎಂಬುದು ನನಗೆ ಗೊತ್ತು’ ಎಂದು ತನುಶ್ರೀ ದತ್ತ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here