ನಾನು ಎಂದೆಂದಿಗೂ ದರ್ಶನ್ ಗೆ ಚಿರಋಣಿ: ನಟಿ ರಚಿತಾ ರಾಮ್!

0
Spread the love

ಬುಲ್ ಬುಲ್’ ಅಂತ ತಮಗೆ ಟೈಟಲ್ ಕೊಟ್ಟಿದ್ದಕ್ಕೆ ದರ್ಶನ್‌ಗೆ ಯಾವಾಗಲೂ ಋಣಿ ಆಗಿರುತ್ತೇನೆ ಎಂದು ನಟಿ ರಚಿತಾ ರಾಮ್ ಹೇಳಿದ್ದಾರೆ.

Advertisement

ಭರ್ಜರಿ ಬ್ಯಾಚುಲರ್ ಸೀಸನ್ 2’ನಲ್ಲಿ ರಕ್ಷಕ್ ಬುಲೆಟ್ ಅವರು ದರ್ಶನ್ ‘ಬುಲ್ ಬುಲ್’ ಚಿತ್ರದ ಸ್ಟೈಲ್ ಕಾಪಿ ಮಾಡಿದ್ದಾರೆ. ರಕ್ಷಕ್ ಬುಲೆಟ್‌ಗೆ ರಮೋಲಾ ಸಾಥ್ ನೀಡಿದ್ದರು. ಇದನ್ನು ನೋಡಿ ರಚಿತಾ ರಾಮ್ ಖುಷಿಯಾಗಿದ್ದಲ್ಲದೆ, ಅದ್ಭುತ ನಟನೆಗೆ ಬೆನ್ನು ತಟ್ಟಿದ್ದಾರೆ. ಸಿನಿಮಾ ನೋಡಿದಂಗೆ ಆಯ್ತು ಎನ್ನುತ್ತಲೇ ಸಿನಿಮಾ ಮಾಡಿದ್ದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ಬುಲ್ ಬುಲ್’ ಅಂತ ತಮಗೆ ಟೈಟಲ್ ಕೊಟ್ಟಿದ್ದಕ್ಕೆ ದರ್ಶನ್‌ಗೆ ಯಾವಾಗಲೂ ಋಣಿ ಆಗಿರುತ್ತೇನೆ ಎಂದಿರುವ ರಚಿತಾ, ಜೀವ ಇರೋತನಕ ನಾನು ‘ಬುಲ್ ಬುಲ್’ ಆಗಿಯೇ ಇರುತ್ತೇನೆ ಎಂದಿದ್ದಾರೆ.

ದರ್ಶನ್ ಎಲ್ಲ ಸಿನಿಮಾಗಳೂ ಹೀರೋ ಬೇಸ್ ಹೆಸರುಗಳಿರುತ್ತವೆ. ಆದರೆ ಫಸ್ಟ್ ಟೈಮ್ ಹೀರೋಯಿನ್ ಬೇಸ್ ಟೈಟಲನ್ನು ‘ಬುಲ್ ಬುಲ್’ಗೆ ಇಡಲಾಗಿತ್ತು. ಅದನ್ನು ದರ್ಶನ್ ಕೂಡ ಹೇಳಿದ್ದರು ಎಂದು ರಚಿತಾ ಹೇಳಿಕೊಂಡಿದ್ದಾರೆ. ‘ಬುಲ್ ಬುಲ್’ ಹೆಸರಿನಿಂದಲೇ ನಾನು ಗುರುತಿಸಿಕೊಂಡಿದ್ದೇನೆ. ನನ್ನನ್ನು ಸಿನಿಮಾ ಬಂದ ಕೆಲ ವರ್ಷ ಮಾತ್ರವಲ್ಲ ಈಗಲೂ ‘ಬುಲ್ ಬುಲ್’ ಅಂತಾನೆ ಜನ ಕರೆಯುತ್ತಾರೆ. ನಾನು ಇರೋವರೆಗೂ, ನನ್ನ ಉಸಿರಿರುವವರೆಗೂ ನನ್ನನ್ನು ‘ಬುಲ್ ಬುಲ್’ ಅಂತ ಕರೆದರೆ ನನಗೆ ಖುಷಿ ಎಂದು ರಚಿತಾ ಹೇಳಿದ್ದಾರೆ. ಈ ವೇಳೆ, ದರ್ಶನ್ ಅಭಿಮಾನಿಗಳಿಗೆ ನಮಸ್ಕಾರ ಮಾಡಿ ತಮ್ಮ ಧನ್ಯವಾದ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here