ಬೆಂಗಳೂರು: ಸರ್ಕಾರದ ಮೇಲೆ ನಂಬಿಕೆ ಇರದೇ ಇರೋದ್ರಿಂದ ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ. ನಂಗೆ ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಇಲ್ಲ.
ಹೀಗಾಗಿ, ಸರ್ಕಾರದ ಮೇಲೆ ನಂಬಿಕೆ ಇರದೇ ಇರೋದ್ರಿಂದ ಇದರಲ್ಲಿ ಪಾಲ್ಗೊಳ್ಳಲ್ಲ. ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಜಾತಿ ಜಾತಿ ಮಧ್ಯೆ ಗಲಾಟೆ ತರಲು ಮಾತ್ರ ಇದನ್ನು ಮಾಡುತ್ತಿದ್ದಾರೆ. ದಯವಿಟ್ಟು ನೀವು ಇದರಲ್ಲಿ ಪಾಲ್ಗೊಳ್ಳಬೇಡಿ ಎಂದು ತಿಳಿಸಿದ್ದಾರೆ.
ಬೆಂಗಳೂರು ರಸ್ತೆ ಗುಂಡಿ ವಿಚಾರವಾಗಿ ಮಾತನಾಡಿ, ದೆಹಲಿಯಲ್ಲಿ ಗುಂಡಿ ಇದ್ಯೋ ಇಲ್ವೋ ಯಾಕೆ ಬೇಕು? ಬೆಂಗಳೂರು ಸರಿ ಮಾಡ್ಸಿ ಮೊದಲು. ದೆಹಲಿಯಲ್ಲಿ ಅದ್ಭುತ ಮೆಟ್ರೋ ಕನೆಕ್ಟಿವಿಟಿ ಇದೆ. ಬೆಂಗಳೂರಿನಲ್ಲಿ ಯಾಕಿಲ್ಲ? ಹೋಲಿಕೆ ಮಾಡೋದು ಯಾಕೆ? ಏಳು ಕಿಮೀ ನಡೆದುಕೊಂಡು ಹೋಗಿದ್ದೀನಿ. 100 ಮೀಟರ್‌ಗೊಂದು ರಾಶಿ ರಾಶಿ ಗುಂಡಿಗಳು ಇವೆ. ಅಧಿಕಾರಿಗಳು ನಮ್ ಮಾತು ಕೇಳೋದಾ? ಸಿಎಂ ಡಿಸಿಎಂ ಮಾತು ಕೇಳ್ತಾರಾ ಎಂದು ಪ್ರಶ್ನಿಸಿದ್ದಾರೆ.



