ಐಸಿಸಿ ODI ಬ್ಯಾಟರ್ ಗಳ ರ‍್ಯಾಂಕಿಂಗ್ ನಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನಕ್ಕೇರಿದ್ದಾರೆ. ICC ODI ಬ್ಯಾಟರ್‌ಗಳ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ ಅವರು ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಎರಡು ಸ್ಥಾನಗಳ ಜಿಗಿತದೊಂದಿಗೆ ಭಾರತದ ನಾಯಕ ಶುಭಮನ್ ಗಿಲ್ ಅವರನ್ನೂ ಹಿಂದಕ್ಕೆ ತಳ್ಳಿದ್ದಾರೆ. ಒಂದನೇ ಸ್ಥಾನದಲ್ಲಿದ್ದ ಶುಭಮನ್ ಗಿಲ್ ಅವರು 3ನೇ ಸ್ಥಾನಕ್ಕೆ ಇಳಿದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕೆದಿನ ಸರಣಿಯಲ್ಲಿ ಹಿಟ್ ಮ್ಯಾನ್ ಗರಿಷ್ಠ ರನ್ ಗಳಿಸಿದ್ದರು. ಮೂರು ಪಂದ್ಯಗಳಲ್ಲಿ 1 ಶತಕ, 1 ಅರ್ಧಶತಕ ಸೇರಿ 202ರ ರನ್‌ಗಳಿಸಿ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ರು.
ನೂತನವಾಗಿ ಬಿಡುಗಡೆಯಾದ ಏಕದಿನ ರ‍್ಯಾಂಕಿಗ್‌ನಲ್ಲಿ 781 ಅಂಕಗಳೊಂದಿಗೆ ಹಿಟ್‌ಮ್ಯಾನ್ ಅಗ್ರಸ್ಥಾನದಲ್ಲಿದ್ದಾರೆ. ಅಫ್ಘಾನ್‌ನ ಇಬ್ರಾಹಿಂ ಜದ್ರಾನ್ 764, ಶುಭಮನ್ ಗಿಲ್ 745 ಅಂಕ, ಪಾಕ್‌ನ ಬಾಬರ್ ಆಜಂ 739 ಅಂಕ, ಕಿವೀಸ್‌ನ ಡೇರಿಲ್ ಮಿಚೆಲ್ 734 ಅಂಕಗಳೊಂದಿಗೆ ಕ್ರಮವಾಗಿ 2,3,4,5ನೇ ಸ್ಥಾನಗಳಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದರು. ಆಸಿಸ್‌ವಿರುದ್ಧ 237 ಚೇಸಿಂಗ್‌ನಲ್ಲಿ ಅಜೇಯ 74 ರನ್ ಗಳಿಸಿದರು. ಆದ್ರೆ ಮೊದಲ 2 ಪಂದ್ಯಗಳಲ್ಲಿ ಶೂನ್ಯ ಸುತ್ತಿದರು. ಇದರಿಂದ 725 ಅಂಕಗಳಷ್ಟೇ ಪಡೆದುಕೊಂಡು 5 ರಿಂದ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.



