HomeBengaluru Newsನಿಯಮಾವಳಿಗಳ ತಿದ್ದುಪಡಿ ತರುವದು ಅನಿವಾರ್ಯ

ನಿಯಮಾವಳಿಗಳ ತಿದ್ದುಪಡಿ ತರುವದು ಅನಿವಾರ್ಯ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಕಾಲಕ್ಕೆ ತಕ್ಕಂತೆ ಪರಿಸ್ಥಿತಿಗೆ ಹೊಂದಿಕೊಳ್ಳಲು ಕೆಲ ಸುಧಾರಣೆ ತರುವ ದೃಷ್ಟಿಯಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಈ ಹಿಂದೆ ಇದ್ದ ನಿಯಮಗಳನ್ನು ತಿದ್ದುಪಡಿ ಮಾಡುತ್ತಾ ಬಂದಿದ್ದಾರೆ.

ಅದು ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯ ಮತ್ತು ಅನಿವಾರ್ಯ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು.

ಅವರು ಸೋಮವಾರ ಬೆಂಗಳೂರಿನ ವಿಧಾನಸೌಧದ ಮೊದಲ ಮಹಡಿಯಲ್ಲಿ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಿಯಮಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ತಿದ್ದುಪಡಿ ತರಲು ರಚಿಸಲಾಗಿರುವ ವಿಧಾನ ಪರಿಷತ್ತಿನ ನಿಯಮಾವಳಿಗಳ ಸಮಿತಿಯ ಪ್ರಾರಂಭಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕ ವಿಧಾನ ಪರಿಷತ್ತು ತನ್ನದೇ ಆದ ಘನತೆ ಗೌರವವನ್ನು ಹೊಂದಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲ ನಿಯಮಾವಳಿಗಳನ್ನು ಆಡಳಿತಾತ್ಮಕ ಸುಧಾರಣೆಯ ದೃಷ್ಟಿಯಿಂದ ತಿದ್ದುಪಡಿ ತರುವುದು ಇಂದು ಅತ್ಯವಶ್ಯವಾಗಿದೆ. ಅದಕ್ಕಾಗಿ ಸಮಿತಿಯನ್ನು ರಚಿಸಿ ಕೂಲಂಕುಶವಾಗಿ ಪರಿಶೀಲಿಸಿ ಒಟ್ಟಾಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿ.ಪ. ಸದಸ್ಯರಾದ ಎಚ್.ವಿಶ್ವನಾಥ್, ಬಿ.ಕೆ. ಹರಿಪ್ರಸಾದ್, ಭಾರತಿ ಶೆಟ್ಟಿ, ಎಸ್.ವಿ. ಸಂಕನೂರ, ಕೆ.ಎ. ತಿಪ್ಪೇಸ್ವಾಮಿ, ಕೆ.ಎಸ್. ನವೀನ್, ಮಂಜುನಾಥ್ ಭಂಡಾರಿ ಸೇರಿದಂತೆ ವಿಧಾನ ಪರಿಷತ್ತಿನ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img