ಇನ್‌ಸ್ಟಾಲಿಂಗ್ ಆಫೀಸರಾಗಿ ರೊ. ಆನಂದ ಕುಲಕರ್ಣಿ

0
Inauguration Ceremony of Rotary Institution
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರೊ. ಆನಂದ ಕುಲಕರ್ಣಿಯವರು ಬೆಳಗಾವಿಯ ಪ್ರಸಿದ್ಧ ವಕೀಲರಾದ ಜಿ. ಚ್. ಕುಲಕರ್ಣಿಯವರ ಪುತ್ರರು. ಇವರು ಸಿವಿಲ್ ಇಂಜಿನಿಯರಿಂಗ್ ಪದವೀಧರರು. ಪದವಿ ನಂತರ 5 ವರ್ಷಗಳ ಕಾಲ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಉತ್ತಮ ಬೋಧನಾ ಶ್ರೇಷ್ಠ ಪ್ರಶಸ್ತಿಯನ್ನು ಪಡೆದು ನಂತರ ರೋ. ಆನಂದರವರು ಸಲಹಾ ಸಿವಿಲ್ ಇಂಜಿನೀಯರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಆನಂದ ಅವರು 2002-03ರಲ್ಲಿ ರೋಟರಿ ಸಂಸ್ಥೆ ಬೆಳಗಾವಿ ಸೌಥ್ ಅಧ್ಯಕ್ಷರಾಗಿ, ಅನೇಕ ಹುz್ದೆಗಳನ್ನು ಅಲಂಕರಿಸಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2011-12ನೇ ಸಾಲಿನ ಸಮೂಹ ವಿನಿಮಯ ಅಧ್ಯಯನ ತಂಡದ ನಾಯಕರಾಗಿ ತಂಡವನ್ನು ಯುಎಸ್‌ಎ ಮ್ಯಾಸೆಚೂಟ್ಸೆಗೆ ಕರೆದೊಯ್ದು ಯಶಸ್ವಿಯಾಗಿ ಅಧ್ಯಯನ ಪೂರೈಸಿ ಆಗಮಿಸಿದ್ದಾರೆ. ಶ್ರೀಯುತರು ಈಗಾಗಲೇ ರೋಟರಿ ಅಂತಾರಾಷ್ಟ್ರೀಯ ಪ್ರತಿಷ್ಠಾನಕ್ಕೆ ಸುಮಾರು 27 ಸಾವಿರ ಯುಎಸ್ ಡಾಲರ್‌ನ್ನು ದಾನ ನೀಡಿದ್ದ ಮೇಜರ್ ಡೋನರ್-2 ಲೆವಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ರೋಟರಿ ಸಂಸ್ಥೆ ಗದಗ-ಬೆಟಗೇರಿಯು ಪದಗ್ರಹಣ ಸಮಾರಂಭಕ್ಕೆ ಇನ್‌ಸ್ಟಾಲಿಂಗ್ ಆಫೀಸರ್‌ರಾಗಿ ಆಗಮಿಸಲಿರುವ ರೊ. ಆನಂದ ಜಿ. ಕುಲಕರ್ಣಿಯವರನ್ನು ಸಂಸ್ಥೆಯು ಗದಗ ಜನತೆಯ ಪರವಾಗಿ ಹಾರ್ದಿಕವಾಗಿ ಸ್ವಾಗತಿಸಿದೆ.


Spread the love

LEAVE A REPLY

Please enter your comment!
Please enter your name here