ವಿಜಯಸಾಕ್ಷಿ ಸುದ್ದಿ, ಗದಗ : ಸಿರಿಧಾನ್ಯಗಳು ಭವಿಷ್ಯದ ಆಹಾರವಾದಲ್ಲಿ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ. ಈ ನೆಲೆಯಲ್ಲಿ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಯೋಜನೆಯ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿ ಸಿರಿಧಾನ್ಯಗಳನ್ನು ಬೆಳೆಸಿ ಆಹಾರವಾಗಿ ನೀಡುವ ಕಾರ್ಯ ಶ್ಲಾಘನೀಯ ಎಂದು ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ನಗರದಲ್ಲಿ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟಿಸಿ ಮಾತನಾಡಿ, ಅಧರಕ್ಕೆ ಸಿಹಿ ಆಗಿರುವುದು ಉದರಕ್ಕೆ ಕಹಿ, ಅಧರಕ್ಕೆ ಕಹಿ ಆಗಿರುವುದು ಉದರಕ್ಕೆ ಸಿಹಿ. ನಾವು ಸೇವಿಸುವ ಆಹಾರದಲ್ಲಿ ಗುಣಮಟ್ಟ ಇಲ್ಲ. ಹಿಂದಿನ ಸಾಂಪ್ರದಾಯಕ ಆಹಾರ ಬಳಸುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಸಿರಿ ಮಿಲೆಟ್ ನಿರ್ದೇಶಕ ದಿನೇಶ್ ಎಂ., ಅತಿಥಿಗಳಾದ ರೋಟರಿ ಸೋಶಿಯಲ್ ಕಲ್ಚರ್ ಅಧ್ಯಕ್ಷ ವಿ.ಕೆ. ಗುರುಮಠ, ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜೆ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಯೋಗೀಶ ಎ., ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಮಾಲತೇಶ, ಸಿದ್ದರಾಮಪ್ಪ ಮಡಿವಾಳರ, ಸಿರಿ ಮಿಲೆಟ್ ಹೌಸ್ ಮಾಲೀಕರಾದ ಶರಣಪ್ಪ, ಮಂಜುಳಾ ಮುಂತಾದವರು ಉಪಸ್ಥಿತರಿದ್ದರು.
ಸಿರಿ ಮಿಲೆಟ್ ಮಾರುಕಟ್ಟೆ ಮೇಲ್ವಿಚಾರಕ ಶರಣಪ್ಪ, ವಲಯ ಮೇಲ್ವಿಚಾರಕಿ ಶಿಲ್ಪಾ ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.