ವಿಜಯಸಾಕ್ಷಿ ಸುದ್ದಿ, ಡಂಬಳ : ಪ್ರತಿ ನಿರ್ಮಾಣದ ಶ್ರಮದ ಶಕ್ತಿಯಾಗಿರುವ ಕಾರ್ಮಿಕರ ಪ್ರಗತಿಗಾಗಿ ಕಾರ್ಮಿಕರಿಗೆ ಸಿಗುವ ಸರ್ಕಾರದ ಸೌಲಭ್ಯಗಳು ತಲುಪಿಸಲು ಕಾರ್ಮಿಕ ಸಂಘಟನೆಗಳ ಪಾತ್ರ ಮುಖ್ಯವಾದುದು ಎಂದು ಗ್ರಾಮ ಪಂಚಾಯತ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ ಹೇಳಿದರು.
ಡಂಬಳ ಗ್ರಾಮದ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಜರುಗಿದ ತುಂಗಭದ್ರಾ ಕಟ್ಟಡ ಕಾರ್ಮಿಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂಡರಗಿಯ ಕಾರ್ಮಿಕ ಇಲಾಖೆಯ ಅಧಿಕಾರಿ ಭೀಮರಾವ ಮಾತನಾಡಿ, ಸರ್ಕಾರದಿಂದ ಧನಸಹಾಯ, ಆರೋಗ್ಯ ಕಾರ್ಡ್, ಪಿಂಚಣಿ, ವಿದ್ಯಾರ್ಥಿ ವೇತನ, ಕಾರ್ಮಿಕರ ಕಿಟ್‌ಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ಕಾರ್ಮಿಕರ ಮಕ್ಕಳು ಕೂಡ ಇಂಜಿನಿಯರ್, ಡಾಕ್ಟರ್, ಲಾಯರ್, ಡಿಸಿ, ಎಸಿಯಂತಹ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕೆಂದರೆ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಸಾಧ್ಯ ಎಂದರು.
ಜೆ.ಟಿ. ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿ, ಕೈಗಾರಿಕೆಗೆ ಉತ್ತೇಜನ, ಸಾಮಾಜಿಕ ಭದ್ರತಾ ವ್ಯವಸ್ಥೆ ಸೇರಿದಂತೆ ಯುವ ಜನತೆಗೆ ವಿವಿಧ ರೀತಿಯ ಕೌಶಲ್ಯ ಯೋಜನೆಗಳನ್ನು ರೂಪಿಸಿದ್ದು, ಕಾರ್ಮಿಕರು ಸರಕಾರದ ಯೋಜನೆಗಳ ಸದುಪಯೋಗ ಪಡೆಯುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಲಕ್ಷö್ಮವ್ವ ದೊಡ್ಡಪ್ಪ ಕಾಶಭೋವಿ, ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಕನಕಮೂರ್ತಿ ನರೇಗಲ್ಲ, ಪಿಡಿಒ ಶಶಿಧರ ಹೊಂಬಳ, ಮರಿತೇಮಪ್ಪ ಆದಮ್ಮನವರ, ಬಸವರಾಜ ವಡ್ಡರ, ಲಕ್ಷ್ಮಣ ವಡ್ಡರ, ಎನ್.ಎಮ್. ಬಡಿಗೇರ, ಹುಲಗಪ್ಪ ಜೋಂಡಿ, ಗರೀಬಸಾಬ ನಮಾಜಿ, ನಿಸಾರಅಹ್ಮದ ಡಾಲಾಯತ, ಮರ್ದಾನಸಾಬ ಹಳ್ಳಿಕೇರಿ, ನಾಗಲಿಂಗ ಬಡಿಗೇರ, ಸೋಮೇಶ ಕಾಶಭೋವಿ, ಮುಸ್ತಾಪ ಹಳ್ಳಿಕೇರಿ, ದಾವಲಸಾಬ ನದ್ದಿಮುಲ್ಲಾ ಮುಂತಾದವರಿದ್ದರು.