HomeEducationಉದ್ಯೋಗಾಧಾರಿತ ಕೌಶಲ್ಯ ಅತ್ಯಗತ್ಯ : ನಾಗರಾಜ ದೇಶಪಾಂಡೆ

ಉದ್ಯೋಗಾಧಾರಿತ ಕೌಶಲ್ಯ ಅತ್ಯಗತ್ಯ : ನಾಗರಾಜ ದೇಶಪಾಂಡೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಉದ್ಯೋಗಾಧಾರಿತ ಕೌಶಲ್ಯಗಳನ್ನು ರೂಢಿಸಿಕೊಂಡು ಯಶಸ್ವಿ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದು ಪ.ಪಂ ಸದಸ್ಯ ನಾಗರಾಜ ದೇಶಪಾಂಡೆ ಹೇಳಿದರು.

ಅವರು ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜಿನ 2024/25ನೇ ಸಾಲಿನ ಶೈಕ್ಷಣಿಕ ಸಾಲಿನ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಹಾಗೂ ವಿವಿಧ ಕೌಶಲ್ಯಗಳನ್ನು ಕರಗತಗೊಳಿಸಿಕೊಂಡಲ್ಲಿ ಜೀವನದ ಹಾದಿ ಸುಗಮವಾಗುತ್ತದೆ ಎಂದರು.

ಲಕ್ಷ್ಮೇಶ್ವರ ಸರಕಾರಿ ಪದವಿಪೂರ್ವ ಮಾಹಾವಿದ್ಯಾಲಯದ ಉಪನ್ಯಾಸಕ ಬಸವಣ್ಣೆಪ್ಪ ಮುರಳಿಹಳ್ಳಿ ಮಾತನಾಡಿ, ಸಾಧನೆಗೆ ಅಂಗವೈಕಲ್ಯ, ಬಡತನ ಯಾವುದೂ ಅಡ್ಡಿ ಬರುವುದಿಲ್ಲ. ಸಾಧಿಸುವ ಛಲ, ಗುರಿ, ಯಶಸ್ಸಿನ ಮನೋಭಾವ, ಯೋಚನಾ ಶಕ್ತಿ, ಗಟ್ಟಿ ನಿರ್ಧಾರಗಳನ್ನು ವಿದ್ಯಾರ್ಥಿ ಹಂತದಲ್ಲೇ ರೂಡಿಸಿಕೊಂಡಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಆರ್.ಎಂ. ಕಲ್ಲನಗೌಡರ ಮಾತನಾಡಿ, ಮಕ್ಕಳಲ್ಲಿ ಅಪಾರ ಜ್ಞಾನದ ಬಂಡಾರ ಅಡಗಿದೆ. ಅದನ್ನು ಸದ್ವಿನಿಯೋಗ ಮಾಡಿಕೊಳ್ಳಲು ಈ ಪದವಿ ಹಂತದಲ್ಲಿ ಸಾಧ್ಯವಾಗುತ್ತದೆ. ಇದರಿಂದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

ಪ.ಪಂ ಸದಸ್ಯ ಎಸ್.ಸಿ. ಬಡ್ನಿ, ಪ್ರಸನ್ನ ಎಸ್, ಅನುಪಮ, ಜಾನಕಿ ಮರಾಠೆ, ತಾರಾದೇವಿ, ವಿನಾಯಕ ಶಿರಬಡಿಗಿ, ಗೀತಾಂಜಲಿ, ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ಅತಿಥಿ ಉಪನ್ಯಾಸಕರು ಇದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!