ಸೂಕ್ತ ಸಮಯಕ್ಕೆ ಸೌಲಭ್ಯ ಒದಗಿಸಿ : ದಿವ್ಯ ಪ್ರಭು

0
Incentive Dhana or Subsidy Dhana
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಸರಕಾರವು ಯಾವುದೇ ಪ್ರೋತ್ಸಾಹ ಧನ ಅಥವಾ ಸಹಾಯ ಧನವನ್ನು ರೈತರ ಹಾಗೂ ಸಾರ್ವಜನಿಕರ ಜೀವನೋಪಾಯಕ್ಕಾಗಿ ಬಿಡುಗಡೆ ಮಾಡುತ್ತದೆ. ಆದ್ದರಿಂದ ಬರ ಪರಿಹಾರದ ಹಣ ಸೇರಿದಂತೆ ವೃದ್ಧಾಪ್ಯ ವೇತನ, ಅಂಗವಿಕಲರ ಮಾಶಾಸನ, ನರೇಗಾ ಕೂಲಿ ಹಾಗೂ ಸರಕಾರದಿಂದ ಬಿಡುಗಡೆ ಆಗಿರುವ ಯಾವುದೇ ಪ್ರೋತ್ಸಾಹಧನವನ್ನು ಸಾಲದ ಖಾತೆಗೆ ಜಮಾ ಮಾಡಬಾರದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

Advertisement

ಧಾರವಾಡದ ರುಡ್‌ಸೆಟ್ ಆವರಣದ ಸಭಾಂಗಣದಲ್ಲಿ ಆರ್.ಬಿ.ಐ ಅಧಿಕಾರಿ ಮೋನಿ ರಾಜ ಬ್ರಹ್ಮ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಅವರ ಉಪಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರುಗಳ ಜೊತೆ ತುರ್ತು ಸಭೆಯನ್ನು ಜರುಗಿಸಿ, ಮಾತನಾಡಿದರು.

ಧಾರವಾಡ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸರಕಾರದ ಯೋಜನೆಗಳ ಲಾಭವನ್ನು ತಲುಪಿಸುತ್ತಿವೆ. ಆದರೆ ಎಲ್ಲ ಬ್ಯಾಂಕ್‌ಗಳು ಇದನ್ನು ಅನುಸರಿಸಬೇಕು. ಸರಿಯಾದ ಸಮಯಕ್ಕೆ ಸಾಲ, ಸಹಾಯಧನ ಸೌಲಭ್ಯ ದೊರೆಯಬೇಕು ಎಂದರು.

ರೈತರ ಸಹಮತವಿಲ್ಲದೆ ಬರಪರಿಹಾರ ಸೇರಿದಂತ ಯಾವುದೇ ಪ್ರೋತ್ಸಾಹಧನವನ್ನು ಸಾಲಕ್ಕೆ ಜಮೆ ಮಾಡಬಾರದು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಎಲ್ಲ ಬ್ಯಾಂಕ್ ಶಾಖೆಗಳಿಗೆ ಮಾಹಿತಿ ನೀಡಿ, ರೈತರಿಗೆ ತೊಂದರೆ ಆಗದಂತೆ ನಿರಂತರ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಆರ್.ಬಿ.ಐ ಅಧಿಕಾರಿ ಮೋನಿ ರಾಜ ಬ್ರಹ್ಮ ಆರ್.ಬಿ.ಐನ ಮಾರ್ಗಸೂಚಿ ಮತ್ತು ನೀತಿಯನ್ನು ವಿವರಿಸಿದರು.

ಸಭೆಯಲ್ಲಿ ಎಸ್.ಬಿ.ಐ, ಕೆನರಾ, ಕೆವಿಜಿಬಿ, ಬ್ಯಾಂಕ್ ಆಫ್ ಬರೋಡಾ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here