ತರಬೇತಿ ಅವಧಿಯಲ್ಲಿ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಿ

0
agadi
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಂದಿನ ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ಭವಿಷ್ಯದಲ್ಲಿ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು ಪಠ್ಯ ಶಿಕ್ಷಣದೊಂದಿಗೆ ಮಕ್ಕಳಿಗೆ ಪಠ್ಯೇತರ ಶಿಕ್ಷಣದ ಜ್ಞಾನವನ್ನು ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ತರಬೇತಿ ಅವಧಿಯಲ್ಲಿ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕು ಎಂದು ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಗಿರೀಶ ಯತ್ತಿನಹಳ್ಳಿ ಹೇಳಿದರು.

Advertisement

ಅವರು ಪಟ್ಟಣದ ಚನ್ನಮ್ಮ ಶೈಕ್ಷಣಿಕ ವಿವಿದೋದ್ದೇಶಗಳ ಸಮಿತಿ ಶ್ರೀ ಸಹಸ್ರಾರ್ಜುನ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟ ಮತ್ತು ಶೈಕ್ಷಣಿಕ ಚಟುವಟಕೆಗಳ ಕಾರ್ಯಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶೈಕ್ಷಣಿಕ, ಸಾಮಾಜಿಕ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರಶಿಕ್ಷಣಾರ್ಥಿಗಳು ಸದಾ ಓದುವ, ಬರೆಯುವ ಮತ್ತು ಶೈಕ್ಷಣಿಕ ಕ್ರಿಯಾ ಚಟುವಟಿಕೆಗಳಲ್ಲಿ ತಮ್ಮ ತೊಡಗಿಸಿಕೊಳ್ಳಬೇಕು. ಮೊಬೈಲ್ ಯುಗದಲ್ಲಿ ಶಿಕ್ಷಕರು ತರಗತಿ ಕೊಠಡಿಗೆ ಹೋಗುವ ಮೊದಲು ಪೂರ್ವಸಿದ್ಧತೆ ಮತ್ತು ಬಹಳಷ್ಟು ಅಪ್ಡೇಟ್ ಆಗಬೇಕಾಗುತ್ತದೆ ಎಂದರು.

ಆನಂದ ಗಡ್ಡದೇವರಮಠ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದೆ. ಶಿಕ್ಷಕರು ಬಿತ್ತಿದ ಜ್ಞಾನದ ಬೀಜ ಮತ್ತು ಉತ್ತಮ ಆಲೋಚನೆ, ಸಂಸ್ಕಾರಗಳಿAದ ವಿದ್ಯಾರ್ಥಿ ದೇಶದ ಸತ್ಪಜೆಯಾಗಲು ಸಾಧ್ಯವಾಗುತ್ತದೆ. ಮಕ್ಕಳ ಭವಿಷ್ಯದೊಂದಿಗೆ ದೇಶದ ಭವಿಷ್ಯ ಬರೆಯುವ ಗುರುತರ ಜವಾಬ್ದಾರಿ ವಹಿಸಬೇಕಾಗುತ್ತದೆ. ಬದಲಾದ ಕಾಲಕ್ಕೆ ತಕ್ಕಂತೆ ಶಿಕ್ಷಕರು ಮಾಹಿತಿ ಸಂವಹನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾ ಖೋಡೆ ಅಧ್ಯಕ್ಷತೆ ವಹಿಸಿದ್ದರು. ವಸಂತಸಾ ಜಿ.ಖೋಡೆ, ಶೇಷಗಿರಸಾ ಬಾಕಳೆ, ಕೃಷ್ಣಸಾ ಖೋಡೆ, ಮಲ್ಲಯ್ಯ ಹೊಸಮಠ, ಪರಶುರಾಮ ಬದಿ, ಖೀರಾಸಾ ಕರಾಠೆ, ಎಂ. ಸಿದ್ದಲಿಂಗಯ್ಯ, ಜಿ.ಎಸ್. ಖೋಡೆ, ವೆಂಕಟೇಶ ಪೂಜಾರಿ, ಎಂ.ಡಿ. ಶಿದ್ಲಿಂಗ ಸೇರಿ ಹಲವರಿದ್ದರು. ಪ್ರಾಚಾರ್ಯ ಆರ್.ಎಂ. ಅಂಗಡಿ ಸ್ವಾಗತಿಸಿದರು.


Spread the love

LEAVE A REPLY

Please enter your comment!
Please enter your name here