ಬೆಂಗಳೂರು:- ಮನೆಯ ಮುಂದೆ ಬಿಟ್ಟಿರುವ ಚಪ್ಪಲಿ, ಶೂಗಳನ್ನು ಕಳ್ಳರು ಬಿಡುತ್ತಿಲ್ಲ. ಬೆಂಗಳೂರಿನಲ್ಲಿ ಚಪ್ಪಲಿ ಕಳ್ಳರ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮನೆಯ ಮುಂದೆ ಇರುವ ಬ್ರ್ಯಾಂಡೆಡ್ ಶೂ, ಚಪ್ಪಲಿಗಳನ್ನು ಕದಿಯುತ್ತಿದ್ದಾರೆ.
ಒಂದೇ ಏರಿಯಾದ ಎರಡು ಮೂರು ಮನೆಗಳಲ್ಲಿ ಕಳ್ಳರು ಚಪ್ಪಲಿ, ಶೂ ಕದ್ದಿರುವ ದೃಶ್ಯ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಬೃಂದಾವನ ಲೇಔಟ್ ನಲ್ಲಿ ಕಂಡು ಬಂದಿದೆ.
ಪವನ್ ಹಾಗೂ ನರಸಿಂಹಮೂರ್ತಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಇದೇ ತಿಂಗಳ ಕಳೆದ 22 ಹಾಗೂ 23 ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನರಸಿಂಹಮೂರ್ತಿ ಎಂಬುವವರು ಪ್ರಶಾಂತ್ ಗೆ ಬಾಡಿಗೆ ಮನೆ ನೀಡಿದ್ದಾರೆ. ಇದೇ ಪ್ರಶಾಂತ್ ಮನೆಯಲ್ಲಿ ಕಳ್ಳರು ಕಾಸ್ಟ್ಲೀ ಶೂ, ಚಪ್ಪಲಿ ಕದ್ದೊಯ್ದಿದ್ದಾರೆ. ಇನ್ನು ಪವನ್ ಎಂಬುವರ ಮನೆಯ ಕಾಂಪೌಂಡ್ ಹಾರಿ ಕಳ್ಳರು ಬಂದಿರೋ ದೃಶ್ಯ ಸೆರೆಯಾಗಿದೆ.
ಕಳ್ಳರ ಎಂಟ್ರಿಯಿಂದ ಭಯಭೀತರಾಗಿ ಏರಿಯಾ ಮಂದಿ ಆತಂಕ ಗೊಂಡಿದ್ದಾರೆ.