ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಇಂಜುರಿಗೆ ತುತ್ತಾದ ಶುಭ್ಮನ್ ಗಿಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಡಿಸ್ಚಾರ್ಜ್ ಆಗಿದ್ದಾರೆ. 2ನೇ ದಿನದಾಟದಲ್ಲಿ ಬ್ಯಾಟಿಂಗ್ಗೆ ವೇಳೆ ಗಿಲ್ ಕತ್ತಿನ ಬಳಿ ಸ್ನಾಯು ಸೆಳೆತ ಒಳಗಾದ್ರು. ಕೂಡಲೇ ಫೀಲ್ಡ್ನಿಂದ ಹೊರ ನಡೆದ ಗಿಲ್ ಮತ್ತೆ ಮೈದಾನಕ್ಕಿಳಿಯಲಿಲ್ಲ. ಮೊದಲ ದಿನದಾಟ ಅಂತ್ಯದ ಬಳಿಕ ಗಿಲ್ ಸ್ಕ್ಯಾನ್ಗೆ ತೆರಳಿದ್ದು, ಈ ವೇಳೆ ಇಂಜುರಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು.
ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೌರವ್ ಗಂಗೂಲಿ ವುಡ್ಲ್ಯಾಂಡ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗಿಲ್ ಅವರನ್ನು ಭೇಟಿ ಮಾಡಿದರು. ರೆವ್ ಸ್ಪೋರ್ಟ್ಸ್ ವರದಿಯ ಪ್ರಕಾರ, ಗಿಲ್ ಅವರ ನೋವು ಈಗ ಕಡಿಮೆಯಾಗಿದೆ. ಇದರ ಹೊರತಾಗಿಯೂ, ಅವರಿಗೆ 4-5 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.
ಎರಡನೇ ದಿನದ ಆಟ ಪ್ರಾರಂಭವಾಗುವ ಮೊದಲು ಗಿಲ್ ಕುತ್ತಿಗೆ ನೋವು ಅನುಭವಿಸಿದರು. ಅವರು ಬ್ಯಾಟಿಂಗ್ ಮಾಡಲು ಹೊರಬಂದ ತಕ್ಷಣ ಬೌಂಡರಿ ಹೊಡೆದರು, ನಂತರ ಅವರಿಗೆ ನೋವು ಗಮನಾರ್ಹವಾಗಿ ಹೆಚ್ಚಾಯಿತು. ಮೂರನೇ ದಿನದ ಆಟ ಪ್ರಾರಂಭವಾಗುವ ಮೊದಲು, ಗಿಲ್ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಘೋಷಿಸಿತು.
ಎರಡನೇ ಟೆಸ್ಟ್‌ನಲ್ಲಿ ಶುಭ್ಮನ್ ಗಿಲ್ ಭಾಗವಹಿಸುವ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಎರಡೂ ತಂಡಗಳ ನಡುವಿನ ಎರಡನೇ ಟೆಸ್ಟ್ ನವೆಂಬರ್ 22 ರಂದು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಗಿಲ್ ಅವರನ್ನು 4-5 ದಿನಗಳ ಕಾಲ ವಿಶ್ರಾಂತಿ ಪಡೆಯಲು ಕೇಳಲಾಗಿದೆ. ಅದಕ್ಕಾಗಿಯೇ ಅವರು ಎರಡನೇ ಪಂದ್ಯದಲ್ಲಿ ಭಾಗವಹಿಸುವುದು ಸ್ಪಷ್ಟವಾಗಿಲ್ಲ.



