• About
  • Advertise
  • Privacy & Policy
  • Contact
Thursday, October 22, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Sports News

ಅಫ್ಘಾನಿಸ್ತಾನ ಸರಣಿಗೆ ಭಾರತ ಸಜ್ಜು; ರೋಹಿತ್-ಹಾರ್ದಿಕ್ ಫಿಟ್ನೆಸ್ ಮೇಲೆ ಕಣ್ಣಿಟ್ಟ ಬಿಸಿಸಿಐ

Vijaya Sakshi by Vijaya Sakshi
June 3, 2026
in Sports News
0
ಅಫ್ಘಾನಿಸ್ತಾನ ಸರಣಿಗೆ ಭಾರತ ಸಜ್ಜು; ರೋಹಿತ್-ಹಾರ್ದಿಕ್ ಫಿಟ್ನೆಸ್ ಮೇಲೆ ಕಣ್ಣಿಟ್ಟ ಬಿಸಿಸಿಐ
0
SHARES
0
VIEWS
Share on FacebookShare on Twitter

ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಸಜ್ಜಾಗುತ್ತಿದೆ. ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎರಡೂ ಸರಣಿಗಳಿಗಾಗಿ ತಂಡಗಳನ್ನು ಪ್ರಕಟಿಸಿದ್ದು,

ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇಬ್ಬರೂ ಸಂಪೂರ್ಣ ಫಿಟ್ ಆಗಿರುವುದು ಖಚಿತವಾದ ಬಳಿಕವೇ ಅಂತಿಮವಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಆಟಗಾರರ ದೈಹಿಕ ಸಾಮರ್ಥ್ಯ ಪರಿಶೀಲನೆಗಾಗಿ ಬಿಸಿಸಿಐ, ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ಅವರಿಗೆ ಆರೋಗ್ಯ ತಪಾಸಣೆಗೆ ಹಾಜರಾಗುವಂತೆ ಸೂಚಿಸಿದೆ. ಇದರಂತೆ ಹಾರ್ದಿಕ್ ಪಾಂಡ್ಯ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಒಂದು ವಾರ ಕಾಲ ತರಬೇತಿ ಮತ್ತು ಫಿಟ್ನೆಸ್ ಮೌಲ್ಯಮಾಪನಕ್ಕೆ ಒಳಗಾಗಲಿದ್ದಾರೆ.

ತಪಾಸಣೆ ಪೂರ್ಣಗೊಂಡ ಬಳಿಕ ಅವರು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೋಹಿತ್ ಶರ್ಮಾ ಅವರ ಫಿಟ್ನೆಸ್ ಕುರಿತಾಗಿ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಜಮ್ಮು ಮತ್ತು ಕಾಶ್ಮೀರದ ಪ್ರತಿಭಾವಂತ ವೇಗಿ ಔಕಿಬ್ ನಬಿ ದಾರ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 6ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಲು ಬಿಸಿಸಿಐ ಔಕಿಬ್ ಅವರಿಗೆ ಅವಕಾಶ ನೀಡಿದೆ.

ಅಫ್ಘಾನಿಸ್ತಾನ ತಂಡದಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳಿರುವುದರಿಂದ, ನೆಟ್‌ಗಳಲ್ಲಿ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಸನ್‌ರೈಸರ್ಸ್ ಹೈದರಾಬಾದ್ ತಂಡದ ಲೆಗ್ ಸ್ಪಿನ್ನರ್ ಜೀಶನ್ ಅನ್ಸಾರಿ ಅವರನ್ನೂ ಅಭ್ಯಾಸ ಶಿಬಿರಕ್ಕೆ ಕರೆಸಲಾಗಿದೆ.

ಕೇವಲ ಏಳು ದಿನಗಳ ಅವಧಿಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಬೇಕಿರುವ ಕಾರಣ ವೇಗದ ಬೌಲರ್‌ಗಳ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ. ಇದರ ಜೊತೆಗೆ ಹವಾಮಾನ ವೈಪರಿತ್ಯವೂ ತಲೆನೋವಾಗಿ ಪರಿಣಮಿಸಿದೆ.

ಈ ಹಿನ್ನೆಲೆಯಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಸೇರಿದಂತೆ ಪ್ರಮುಖ ವೇಗಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಿದ್ಧತೆ ನಡೆಸಲು ವಿಶೇಷ ತರಬೇತಿ ನೀಡಲಾಗುತ್ತಿದೆ. ಬ್ಯಾಟರ್‌ಗಳಿಗೂ ಹೆಚ್ಚಿನ ಅಭ್ಯಾಸದ ಅಗತ್ಯವಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರಣಜಿ ಟ್ರೋಫಿಯ ಹಾಲಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಔಕಿಬ್ ನಬಿ ದಾರ್, ಕಳೆದ ಋತುವಿನಲ್ಲಿ 60 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು. ಆದಾಗ್ಯೂ, ಬಿಸಿಸಿಐ ಪ್ರಕಟಿಸಿರುವ 15 ಸದಸ್ಯರ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ.

ಆದರೆ ಅಭ್ಯಾಸ ಪಂದ್ಯಗಳ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವರಿಗೆ ಅವಕಾಶ ದೊರೆತಿದ್ದು, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಗುರ್ನೂರ್ ಬ್ರಾರ್‌ರೊಂದಿಗೆ ತರಬೇತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಮತ್ತೊಬ್ಬ ವೇಗಿ ಶಶಿಕಾಂತ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ಮಾಜಿ ನಾಯಕ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗ್ಸರ್ಕರ್, ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಅವಕಾಶ ನೀಡದಿದ್ದರೆ ರಣಜಿ ಟ್ರೋಫಿಯ ಮಹತ್ವವೇನು ಎಂದು ಪ್ರಶ್ನಿಸಿದ್ದಾರೆ.

ಭಾರತ ತಂಡದ ಮೊದಲ ಅಭ್ಯಾಸ ಪಂದ್ಯ ಮಂಗಳವಾರ ಮಧ್ಯಾಹ್ನ ಆರಂಭವಾಗಲಿದೆ. ಆದರೆ ಇತ್ತೀಚೆಗೆ ಐಪಿಎಲ್ ಫೈನಲ್‌ನಲ್ಲಿ ಆಡಿದ್ದ ಆಟಗಾರರು ಮೊದಲ ದಿನದ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆಯಿದೆ.

ಗುಜರಾತ್ ಟೈಟಾನ್ಸ್ ತಂಡದ ಆಟಗಾರರಾದ ಶುಭಮನ್ ಗಿಲ್, ಸಾಯಿ ಸುದರ್ಶನ್, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಮಾನವ್ ಸುತಾರ್ ಹಾಗೂ ವಾಷಿಂಗ್ಟನ್ ಸುಂದರ್ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ತಂಡದ ಭಾಗವಾಗಿದ್ದಾರೆ.

ಅಫ್ಘಾನಿಸ್ತಾನ ಸರಣಿಗೆ ಮುನ್ನ ಭಾರತ ತಂಡದ ಸಿದ್ಧತೆಗಳು ಚುರುಕುಗೊಂಡಿದ್ದು, ಫಿಟ್ನೆಸ್, ತಂಡದ ಸಮತೋಲನ ಮತ್ತು ಯುವ ಆಟಗಾರರ ಪ್ರದರ್ಶನದ ಮೇಲೆ ಬಿಸಿಸಿಐ ವಿಶೇಷ ಗಮನ ಹರಿಸಿದೆ.

Tags: BreakingNewsharthik pandyaKannadaLatestNewsKarnatakaRohit SharmaVijayasakshivijayasakshinews
Previous Post

‘ಜನಸೇವೆಯಲ್ಲಿ ಯಶಸ್ಸು ಸಿಗಲಿ’: ಸಿಎಂ ಆಗುತ್ತಿರುವ ಡಿಕೆಶಿಗೆ ಸ್ವಾಮೀಜಿಯ ಆಶೀರ್ವಾದ 

Next Post

ಎಲ್ಲರನ್ನೂ ಜೊತೆಗೂಡಿಸಿಕೊಂಡು ಕರ್ನಾಟಕ ಮುನ್ನಡೆಸಿರಿ: ಡಿ.ಕೆ. ಶಿವಕುಮಾರ್ʼಗೆ ಸೋನಿಯಾ ಗಾಂಧಿ ಶುಭಾಶಯ

Vijaya Sakshi

Vijaya Sakshi

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಎಲ್ಲರನ್ನೂ ಜೊತೆಗೂಡಿಸಿಕೊಂಡು ಕರ್ನಾಟಕ ಮುನ್ನಡೆಸಿರಿ: ಡಿ.ಕೆ. ಶಿವಕುಮಾರ್ʼಗೆ ಸೋನಿಯಾ ಗಾಂಧಿ ಶುಭಾಶಯ

ಎಲ್ಲರನ್ನೂ ಜೊತೆಗೂಡಿಸಿಕೊಂಡು ಕರ್ನಾಟಕ ಮುನ್ನಡೆಸಿರಿ: ಡಿ.ಕೆ. ಶಿವಕುಮಾರ್ʼಗೆ ಸೋನಿಯಾ ಗಾಂಧಿ ಶುಭಾಶಯ

Leave a Reply Cancel reply

Your email address will not be published. Required fields are marked *

Stay Connected test

  • 24k Followers
  • 99 Subscribers
  • Trending
  • Comments
  • Latest
ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

October 21, 2026
Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

October 21, 2026

ಸೊಲ್ಲಾಪುರದಿಂದ ಗಾಂಜಾ ಪೂರೈಕೆ, ಗದಗದಲ್ಲಿ ಮಾರಾಟ: ಗಂಗಿಮಡಿಯ ಇಬ್ಬರು ಸೇರಿ ನಾಲ್ವರ ಬಂಧನ

October 18, 2026
ಹೆತ್ತ ಮಕ್ಕಳಿಗಿಂತ ಪ್ರಿಯಕರನೇ ಮುಖ್ಯವಾಯ್ತಾ? ಅಕ್ರಮ ಸಂಬಂಧ ವಿರೋಧಿಸಿದ್ದ ಅವಳಿ ಮಕ್ಕಳ ಭೀಕರ ಹತ್ಯೆ!

ಹೆತ್ತ ಮಕ್ಕಳಿಗಿಂತ ಪ್ರಿಯಕರನೇ ಮುಖ್ಯವಾಯ್ತಾ? ಅಕ್ರಮ ಸಂಬಂಧ ವಿರೋಧಿಸಿದ್ದ ಅವಳಿ ಮಕ್ಕಳ ಭೀಕರ ಹತ್ಯೆ!

October 21, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಆಯುಧ ಪೂಜೆಯಲ್ಲೇ ಬಂದೂಕಿನಿಂದ ಫೈರಿಂಗ್! ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡನ ನಡೆಗೆ ತೀವ್ರ ಆಕ್ಷೇಪ

ಆಯುಧ ಪೂಜೆಯಲ್ಲೇ ಬಂದೂಕಿನಿಂದ ಫೈರಿಂಗ್! ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡನ ನಡೆಗೆ ತೀವ್ರ ಆಕ್ಷೇಪ

October 22, 2026
ಬರಗಾಲದಿಂದ ತತ್ತರಿಸಿದ ಕರ್ನಾಟಕಕ್ಕೆ ₹20,585 ಕೋಟಿ ಪರಿಹಾರ ನೀಡಿ: ಕೇಂದ್ರಕ್ಕೆ ಮತ್ತೆ ಪತ್ರ ಬರೆದು ಡಾ. ಜಿ. ಪರಮೇಶ್ವರ್ ಆಗ್ರಹ!

ಬರಗಾಲದಿಂದ ತತ್ತರಿಸಿದ ಕರ್ನಾಟಕಕ್ಕೆ ₹20,585 ಕೋಟಿ ಪರಿಹಾರ ನೀಡಿ: ಕೇಂದ್ರಕ್ಕೆ ಮತ್ತೆ ಪತ್ರ ಬರೆದು ಡಾ. ಜಿ. ಪರಮೇಶ್ವರ್ ಆಗ್ರಹ!

October 22, 2026
ಬುಧವಾರದಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಆರ್ಭಟ: ಈ ಜಿಲ್ಲೆಗಳಿಗೆ ಹೈ ಅಲರ್ಟ್!

ಬೆಂಗಳೂರಿನಲ್ಲಿ ದಿಢೀರ್ ಮಳೆ ಅಬ್ಬರ: ಜಯನಗರ, ಲಾಲ್ ಬಾಗ್ ಸೇರಿ ಹಲವೆಡೆ ಧಾರಾಕಾರ ವರ್ಷಧಾರೆ

October 22, 2026
ಆಸ್ಟ್ರೇಲಿಯಾ ಸ್ಟಾರ್ ಬೌಲರ್ʼಗೆ ಕ್ರಿಕೆಟ್ ಮಂಡಳಿಯಿಂದ ಶಾಕ್! ಎರಡು ಪಂದ್ಯಗಳಿಂದ ಮೇಗನ್ ಶಟ್ ಔಟ್

ಆಸ್ಟ್ರೇಲಿಯಾ ಸ್ಟಾರ್ ಬೌಲರ್ʼಗೆ ಕ್ರಿಕೆಟ್ ಮಂಡಳಿಯಿಂದ ಶಾಕ್! ಎರಡು ಪಂದ್ಯಗಳಿಂದ ಮೇಗನ್ ಶಟ್ ಔಟ್

October 22, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಆಯುಧ ಪೂಜೆಯಲ್ಲೇ ಬಂದೂಕಿನಿಂದ ಫೈರಿಂಗ್! ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡನ ನಡೆಗೆ ತೀವ್ರ ಆಕ್ಷೇಪ

ಆಯುಧ ಪೂಜೆಯಲ್ಲೇ ಬಂದೂಕಿನಿಂದ ಫೈರಿಂಗ್! ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡನ ನಡೆಗೆ ತೀವ್ರ ಆಕ್ಷೇಪ

October 22, 2026
ಬರಗಾಲದಿಂದ ತತ್ತರಿಸಿದ ಕರ್ನಾಟಕಕ್ಕೆ ₹20,585 ಕೋಟಿ ಪರಿಹಾರ ನೀಡಿ: ಕೇಂದ್ರಕ್ಕೆ ಮತ್ತೆ ಪತ್ರ ಬರೆದು ಡಾ. ಜಿ. ಪರಮೇಶ್ವರ್ ಆಗ್ರಹ!

ಬರಗಾಲದಿಂದ ತತ್ತರಿಸಿದ ಕರ್ನಾಟಕಕ್ಕೆ ₹20,585 ಕೋಟಿ ಪರಿಹಾರ ನೀಡಿ: ಕೇಂದ್ರಕ್ಕೆ ಮತ್ತೆ ಪತ್ರ ಬರೆದು ಡಾ. ಜಿ. ಪರಮೇಶ್ವರ್ ಆಗ್ರಹ!

October 22, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

  • E Paper
  • WhatsApp Group
  • E Paper
  • E Paper
error: Content is protected !!
Join WhatsApp Read E-Paper
f 𝕏 WhatsApp Copy Link