ಬಹುನಿರೀಕ್ಷಿತ ಟಿ20 ವಿಶ್ವಕಪ್ 2026 ಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಉಪನಾಯಕನಾಗಿ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಟೂರ್ನಿಯಿಂದ ಶುಭಮನ್ ಗಿಲ್ ಅವರನ್ನು ಕೈ ಬಿಡಲಾಗಿದೆ.
ಭಾರತ ತಂಡ ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸುತ್ತಿದ್ದು, ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧದ ಮುಖಾಮುಖಿ ಎದುರಿಸಲಿದೆ. ಫೆಬ್ರವರಿ 15 ರಂದು ಪಾಕಿಸ್ತಾನ್ ವಿರುದ್ಧದ ಪಂದ್ಯ ಕೊಲೊಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.
ಟಿ20 ವಿಶ್ವಕಪ್ 2026 ಭಾರತ ತಂಡದ ಮೊದಲ ನಾಲ್ಕು ಪಂದ್ಯಗಳು:
-
ಫೆಬ್ರವರಿ 7: ಭಾರತ vs ಯುಎಸ್ಎ (ಮುಂಬೈ)
-
ಫೆಬ್ರವರಿ 12: ಭಾರತ vs ನಮೀಬಿಯಾ (ದೆಹಲಿ)
-
ಫೆಬ್ರವರಿ 15: ಭಾರತ vs ಪಾಕಿಸ್ತಾನ್ (ಕೊಲಂಬೊ)
-
ಫೆಬ್ರವರಿ 18: ಭಾರತ vs ನೆದರ್ಲೆಂಡ್ಸ್ (ಅಹಮದಾಬಾದ್)
ಈ ನಾಲ್ಕು ಪಂದ್ಯಗಳ ನಂತರ, ಟೀಮ್ ಇಂಡಿಯಾ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಲಿದೆ. ಸೂಪರ್-8ನಲ್ಲಿ 4 ಗ್ರೂಪ್ಗಳ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಇರುವ ತಂಡಗಳು ಮುಂದಿನ ಹಂತಕ್ಕೆ ಹೋಗಲಿದ್ದಾರೆ. ಸೂಪರ್-8 ಹಂತದ ಮೇಲೆ, ಟಾಪ್-4 ತಂಡಗಳು ಸೆಮಿಫೈನಲ್ಗೆ ಪ್ರವೇಶ ಪಡೆಯುತ್ತವೆ.ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಕ್ರಿಕೆಟ್ ನಡೆಯಲಿದೆ. ಫೆ.7 ರಿಂದ ಆರಂಭವಾಗಿ ಮಾರ್ಷ್ 8ವರೆಗೆ 20 ಕ್ರಿಕೆಟ್ ಹಬ್ಬ ನಡೆಯಲಿದೆ.



