ಹಾಸನ: ಇನ್ಫೋಸಿಸ್ ಸಂಸ್ಥೆಯ ಸಹ-ಸ್ಥಾಪಕಿ ಸುಧಾಮೂರ್ತಿ ಅವರು ಸಕಲೇಶಪುರದ ಸಕಲೇಶಪುರಸ್ವಾಮಿ ದೇವಾಲಯ ಹಾಗೂ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರಿನಿಂದ ಕುಟುಂಬಸ್ಥರೊಂದಿಗೆ ಧರ್ಮಸ್ಥಳಕ್ಕೆ ತೆರಳುವ ಮಾರ್ಗ ಮಧ್ಯೆ ಅವರು ಈ ದೇವಾಲಯಗಳಿಗೆ ಭೇಟಿ ನೀಡಿದರು. ದೇವಾಲಯದಲ್ಲಿ ನೆಲದ ಮೇಲೆ ಕುಳಿತು ಸಂಕಲ್ಪ ಹಾಗೂ ಅರ್ಚನೆ ನೆರವೇರಿಸಿದರು. ಈ ವೇಳೆ ಮಹಿಳೆಯರು ಸುಧಾಮೂರ್ತಿಗೆ ಬಾಗಿನ ನೀಡಿದರು.
ಪೂಜೆ ನೆರವೇರಿಸಿದ ಬಳಿಕ ಸುಧಾಮೂರ್ತಿ ಧರ್ಮಸ್ಥಳಕ್ಕೆ ತೆರಳಿದರು.ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಸುಧಾಮೂರ್ತಿಗೆ ಭಗವದ್ಗೀತೆ ನೀಡಿ ಗೌರವಿಸಿದರು.
ಜೊತೆಗೆ ಸಕಲೇಶಪುರದ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಅಥವಾ ರಾಜ್ಯಸಭಾ ಸದಸ್ಯರ ಅನುದಾನ ನೀಡುವಂತೆ ಮನವಿ ಮಾಡಿದರು.



