ನಂದಿ ಮೂರ್ತಿ ಪ್ರತಿಷ್ಠಾಪನೆ, ಕಳಸ ಮೆರವಣಿಗೆ

0
Installation and installation of Nandi idol of Chandramauleshwara temple
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದಲ್ಲಿ ನೂತನವಾಗಿ ನವೀಕರಣಗೊಳಿಸಿರುವ ಚಂದ್ರಮೌಳೇಶ್ವರ ಮಂದಿರದ ನಂದಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಅಂಗವಾಗಿ ಬುಧವಾರ ಮೂರ್ತಿ ಹಾಗೂ ಕಳಸದ ಮೆರವಣಿಗೆ ಸಂಭ್ರಮದಿಂದ ನಡೆಯಿತು.

Advertisement

ಸ್ಥಳೀಯ ಗ್ರಾಮ ದೇವತೆ ಹಿರೇದುರ್ಗಾದೇವಿ ದೇಗುಲದಿಂದ ಆರಂಭವಾದ ಮೆರವಣಿಗೆಯಲ್ಲಿ ಸುಮಂಗಲೆಯರು ಕುಂಭಮೇಳ ಹೊತ್ತು ಸಂಚರಿಸಿ ನಂದಿ ದೇವರ ಮೂರ್ತಿ ಹಾಗೂ ಕಳಸವನ್ನು ವಿಜೃಂಭಣೆಯಾಗಿ ಬರಮಾಡಿಕೊಂಡರು.

ಈ ವೇಳೆ ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ತೊಡಗಿದಾಗ ಮನುಷ್ಯನ ಬದುಕು ಸುಂದರ ಹಾಗೂ ಅರ್ಥಪೂರ್ಣವಾಗುತ್ತದೆ. ಪುರಾತನ ಚಂದ್ರಮೌಳೇಶ್ವರ ಮಂದಿರ ಇರುವ ಸ್ಥಳದಲ್ಲಿಯೇ ದೇಗುಲವನ್ನು ಸುಂದರವಾಗಿ ನವೀಕರಿಸಲಾಗಿದೆ. ಈ ಕಾರ್ಯಕ್ಕೆ ಭಕ್ತಾಧಿಗಳು ನೀಡಿದ ಸಹಕಾರ ಸ್ಮರಣೀಯ. ಇಂತಹ ಮಹತ್ವದ ಹಾಗೂ ಅರ್ಥಪೂರ್ಣ ಕೈಂಕರ್ಯದಲ್ಲಿ ಭಾಗಿಯಾದ ತೃಪಿಯಿದೆ ಎಂದರು.

ಗುರುವಾರ ನೂತನ ಗೋಪುರ ಹಾಗೂ ನಂದಿ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಮಹಾಮೃತ್ಯುಂಜಯ ಹೋಮ, ಮಹಾಗಣಪತಿ ಹವನ, ಸುದರ್ಶನ ಹೋಮ ಸೇರಿದಂತೆ ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಮಹಾರುದ್ರಾಭಿಷೇಕ ನಡೆಯಲಿದೆ ಎಂದು ತಿಳಿಸಿದರು.

ಈ ವೇಳೆ ಭದರೀನಾಥ ಜೋಶಿ, ಸಿದ್ದಣ್ಣ ಬಳಿಗೇರ, ಅಶೋಕ ವನ್ನಾಲ, ಬಸವರಾಜ ಬಂಕದ, ಭಾಸ್ಕರ ರಾಯಬಾಗಿ, ಷಣ್ಮುಖಪ್ಪ ಚಿಲಝರಿ, ಪ್ರಕಾಶ ಕಾರಡಗಿ, ಮುದಿಯಪ್ಪ ಮುಧೋಳ, ಸುಭಾಸ ಮ್ಯಾಗೇರಿ, ಮೂಕಪ್ಪ ನಿಡಗುಂದಿ, ಬಸವರಾಜ ಹೂಗಾರ, ಮುತ್ತಣ್ಣ ಚಟ್ಟೇರ, ಸುಲೇಮಾನ ಮೋಮಿನ, ಪರಸಪ್ಪ ಬಂಡಿ, ವಿಜಯ ಬೂದಿಹಾಳ, ಶಿವಣ್ಣ ಸಂಗನಾಳ, ಸಂಗಪ್ಪ ಕುಂಬಾರ, ಬಸವರಾಜ ಕುಷ್ಟಗಿ, ಶೇಖಪ್ಪ ಚಳಗೇರಿ, ನಿಂಗಪ್ಪ ತೊಂಡಿಹಾಳ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here