ಚಿಕ್ಕಬಳ್ಳಾಪುರ: ಬೈಕ್’ನಲ್ಲಿ ಬಂದು ಮಹಿಳೆಯ ಸರ ಕದ್ದ ಕಳ್ಳರು..!

0
Spread the love

ಚಿಕ್ಕಬಳ್ಳಾಪುರ : ಕಳ್ಳರಿಗೆ ಕಡಿವಾಣ ಹಾಕೋದೆ ಕಷ್ಟವಾಗಿದೆ. ಯಾವಾಗ ಬರ್ತಾರೆ ಎಲ್ಲಿ ಇರ್ತಾರೆ ಅನ್ನೋದೆ ತಿಳಿಯೋದಿಲ್ಲ ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿ ಮಾಸ್ಕ್ ಧರಿಸಿ ಬೈಕ್’​ನಲ್ಲಿ ಬಂದ ಕಳ್ಳರು ಮಹಿಳೆಯ ಕತ್ತಿನಲ್ಲಿರುವ ಚೈನ್​ ಕದ್ದು ಎಸ್ಕೇಪ್ ಆಗಿರುವ ಘಟನೆ ನಡೆದಿದೆ.

Advertisement

ನಗರದ ಗಾಯತ್ರಿ ಮತ್ತು ಲಕ್ಷ್ಮಿ ಎಂಬ ಮಹಿಳೆಯರು ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗಾಯತ್ರಿ ಎನ್ನುವವರ ಕತ್ತಿನಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾರೆ. ಇದರಿಂದ ಕಿರುಚಾಡಿದ ಮಹಿಳೆ ಚೈನ್​​ನನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಚೈನ್​ ಎಳೆಯುವಾಗ ನಾಲ್ಕು ಗುಂಡುಗಳು ಕಳ್ಳರು ಕದ್ದಿದ್ದಾರೆ.

ನಂತರ ಜೊತೆಗಿದ್ದ ಸ್ನೇಹಿತೆ ಲಕ್ಷ್ಮಿ ಕುತ್ತಿಗೆಗೂ ಕೈ ಹಾಕಲು ಮುಂದಾಗಿದ್ದು, ಸಾಧ್ಯವಾಗದ ಹಿನ್ನಲೆ ತಕ್ಷಣ ಸ್ಥಳದಿಂದ ಕಳ್ಳರು ಎಸ್ಕೇಪ್ ಆಗಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here