ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದನ್ನೇ ಆಧರಿಸಿ ವಿವರಣೆ ಕೋರಿ ಇದೀಗ ರಾಜ್ಯಪಾಲರು ಮುಡಾ ಅಕ್ರಮ ಸೈಟು ಆರೋಪ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಿದ್ದಾರೆ.ಹೀಗಾಗಿಯೇ ರಾಜಭವನದ ಮೇಲೆ ಸಚಿವರು ಸಂಶಯ ವ್ಯಕ್ತಪಡಿಸಿದ್ದಾರೆ.
Advertisement
ಇ.ಡಿ ಜೊತೆಗೆ ರಾಜಭವನದ ದುರುಪಯೋಗ ಆಗ್ತಿದೆ ಅಂತಾ ಆರೋಪಿಸಿ ಗರಂ ಆಗಿದ್ದಾರೆ. ಈ ನಡುವೆ ಮುಡಾ ವಿಚಾರದಲ್ಲಿ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಡುವುದರ ವಿರುದ್ಧ ಕ್ಯಾಬಿನೆಟ್‌ನಲ್ಲಿ ವಿರೋಧಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕ್ಯಾಬಿನೆಟ್ ನಿರ್ಣಯದ ವೇಳೆ ಸಿಎಂ ಸಿದ್ದರಾಮಯ್ಯ ಸಭೆಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಇದೀಗ ಬಿಜೆಪಿಗರು ಪ್ರತಿ ದಾಳಿಗೆ ನಿಂತಿದ್ದಾರೆ.