ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ಅನ್ನದಾನ ವಿಜಯ ಬಾಲಿಕೆಯರ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಮಾತನಾಡಿ, ಮಾದಕ ವಸ್ತುಗಳು ಎಂದಿಗೂ ನಮ್ಮ ಜೀವಕ್ಕೆ ಹಾನಿಕಾರಕ. ಇವುಗಳ ಸೇವನೆಯಿಂದ ನಮ್ಮ ಜೀವನವೂ ಕೂಡ ದುರ್ಭರವಾಗುತ್ತದೆ. ಮನೆಯಲ್ಲಿನ ಶಾಂತಿ, ನೆಮ್ಮದಿ ಹಾಳಾಗಿ ಎಲ್ಲರೂ ತೊಂದರೆ ಪಡಬೇಕಾದಂತಹ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಎಲ್ಲರೂ ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು ಎಂದರು.
ವಿದ್ಯಾರ್ಥಿನಿಯರು ಮಾದಕ ಸೇವನೆ ವಿರುದ್ಧದ ಫಲಕಗಳನ್ನು ಹಿಡಿದು ಕೋಡಿಕೊಪ್ಪ ಗ್ರಾಮದಲ್ಲಿ ಘೋಷಣೆಗಳನ್ನು ಕೂಗುತ್ತ ಜನಜಾಗೃತಿ ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಎ.ಟಿ. ಮಳ್ಳಳ್ಳಿ, ಎಂ.ಎಸ್. ಅತ್ತಾರ, ಬಿ.ಡಿ. ಯರಗೊಪ್ಪ, ಕೆ.ಸಿ. ಜೋಗಿ, ಎಸ್. ಶಿವಮೂರ್ತಿ, ಎಸ್. ಸಂಶಿ ಹಿರೇಮಠ, ಶಿಕ್ಷಕಿಯರಾದ ಎಸ್.ಎಫ್. ಧರ್ಮಾಯತ, ಆರ್.ಎಂ. ಗುಳಬಾಳ, ಜ್ಯೋತಿ ಪೂಜಾರ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.