ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ: ಮಾನವ ಸರಪಳಿ ನಿರ್ಮಾಣದಲ್ಲಿ ಪಾಲ್ಗೊಂಡ 3.57.555 ಜನ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ಸರ್ಕಾರವು ಕಳೆದ ಸೆಪ್ಟಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಧಾರವಾಡ ಜಿಲ್ಲೆಯಿಂದ ಅತೀ ಹೆಚ್ಚು ಜನರು ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಂಡು ಭಾಗವಹಿಸಿದ್ದರಿಂದ ಮತ್ತು ವಿಭಿನ್ನ ಕಾರ್ಯಕ್ರಮಗಳ ಮೂಲಕ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೊಳಿಸಿದ್ದರಿಂದ ಧಾರವಾಡ ಜಿಲ್ಲೆಗೆ ರಾಜ್ಯ ಸರ್ಕಾರವು ಪ್ರಥಮ ಸ್ಥಾನದ ಪ್ರಶಸ್ತಿ ಪ್ರಕಟಿಸಿತ್ತು.

Advertisement

ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯ ಸರಕಾರದ ನಿರ್ದೇಶನದಂತೆ ಅಚಿತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಸೆ.15ರಂದು ಬೆಳಿಗ್ಗೆ 9.30ರಿಂದ 10.30ರವರೆಗೆ ಜಿಲ್ಲೆಯ ತೇಗೂರ ಗ್ರಾಮ ಹದ್ದೆಯಿಂದ ಮಾವಿನಕೊಪ್ಪ ಗ್ರಾಮ ಹದ್ದೆಯವರೆಗೆ ಸುಮಾರು 51 ಕೀ.ಮಿ.ಉದ್ದದ ಮಾನವ ಸರಪಳಿ ರಚಿಸಲಾಗಿತ್ತು. 9.55ರಿಂದ 10.05ರವರೆಗೆ ಮಾನವ ಸರಪಳಿಯನ್ನು ದಾಖಲೆಗೆ ಪರಿಗಣಿಸಲಾಗಿತ್ತು.

ಮಾನವ ಸರಪಳಿಯಲ್ಲಿ ಒಟ್ಟು 3,57,555  ಜನ ಭಾಗವಹಿಸಿದ್ದರು. ವ್ಯಕ್ತಿಗತವಾಗಿ 47,965 ಮತ್ತು 1914 ಎನ್ ಜಿಓ ಹಾಗೂ ಸಂಘಟನೆಗಳು, ಈ ಸಂಘಟನೆಗಳ 3,07,717 ಜನರು, 129 ವಲಸಿಗರ ಕುಟುಂಗಳು ಮತ್ತು ಈ ಕುಟುಂಬಗಳ ಪೈಕಿ ೧,೮೭೩ ಜನರು ಪಾಲ್ಗೊಂಡಿದ್ದರು. ಒಟ್ಟಾರೆ ಜಿಲ್ಲೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಸರಕಾರಿ ನೌಕರರು, ಕುಟುಂಬಗಳು, ಗ್ರಾಮಗಳ ಜನರು ಸೇರಿದಂತೆ ಸುಮಾರು 3,57,555 ಜನರು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.

ಈ ಎಲ್ಲ ವಿಶೇಷತೆ ಹಾಗೂ ಹೆಚ್ಚು ಜನ ಆನ್‌ಲೈನ್ ನೋಂದಣಿ ಆಗಿರುವದನ್ನು ಗಮನಿಸಿರುವ ರಾಜ್ಯ ಸರಕಾರ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನದ ಬಹುಮಾನ ನೀಡಿ, ಗೌರವಿಸಿ ಪ್ರೋತ್ಸಾಹಿಸಿದೆ. ಕಂದಾಯ ಇಲಾಖೆಯ ಸೇವೆಗಳ ಗುಣಮಟ್ಟದ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ಉತ್ತಮ ಜಿಲ್ಲಾಧಿಕಾರಿ, ಗ್ರಾಮ ಆಡಳಿತ ಅಧಿಕಾರಿ ಮತ್ತು ಉತ್ತಮ ಸಮಾಲೋಚಕ ಪ್ರಶಸ್ತಿ ಗಳಿಸಿದ್ದ ಧಾರವಾಡ ಜಿಲ್ಲೆಗೆ ಈಗ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ರಾಜ್ಯಕ್ಕೆ ಪ್ರಥಮ ಪ್ರಶಸ್ತಿ ಬಂದಿರುವುದು ಜಿಲ್ಲಾಡಳಿತ ಮತ್ತು ಜಿಲ್ಲೆಯ ನೌಕರರಿಗೆ ಹೆಮ್ಮೆ, ಪ್ರೋತ್ಸಾಹ ಹೆಚ್ಚಿಸಿದೆ.


Spread the love

LEAVE A REPLY

Please enter your comment!
Please enter your name here