ಬಿಗ್ ಬಾಸ್ ಮನೆಯಲ್ಲಿ ಆಟ ಜೋರಾಗಿದೆ. ಇದರ ಬೆನ್ನಲ್ಲೇ ಈ ವಾರ ಬಿಗ್ಬಾಸ್ ಮನೆಯಿಂದ ತ್ರಿವಿಕ್ರಮ್ ಆಚೆ ಬಂದಿದ್ದಾರೆ. ಇದು ಎಲ್ಲಾರಿಗೂ ಶಾಕಿಂಗ್ ಆಗಿದೆ. ಈ ವಾರ ಯಾವುದೇ ವೋಟಿಂಗ್ ಲೈನ್ ತೆರೆದಿರಲಿಲ್ಲ. ಆದಾಗ್ಯೂ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಅಂತಿಮವಾಗಿ ತ್ರಿವಿಕ್ರಂ ಅವರು ದೊಡ್ಮನೆಯಿಂದ ಹೊರ ಹೋಗುತ್ತಿದ್ದಾರೆ ಎಂದು ಸುದೀಪ್ ಘೋಷಣೆ ಮಾಡಿದರು.
‘ನಿಮಗೆ ನನ್ನ ಜೊತೆ ಬಂದು ಸೇರಲು ಐದು ನಿಮಿಷ ಕಾಲಾವಕಾಶ ಇದೆ’ ಎಂದರು ಕಿಚ್ಚ. ಎಲ್ಲರೂ ಇದು ಪ್ರ್ಯಾಂಕ್ ಇರಬಹುದು ಎಂದುಕೊಂಡಿದ್ದರು. ತ್ರಿವಿಕ್ರಂ ಕೂಡ ಹಾಗೆಯೇ ಅಂದುಕೊಂಡಂತೆ ಇತ್ತು. ಆದರೆ, ಹಾಗಾಗಲಿಲ್ಲ. ಬಿಗ್ ಬಾಸ್ ಗಾರ್ಡನ್ ಏರಿಯಾಗೆ ಬರುತ್ತಿದ್ದಂತೆ ಮುಖ್ಯದ್ವಾರ ಓಪನ್ ಆಯಿತು. ಅದರಿಂದ ಹೊರಕ್ಕೂ ಹೋದರು. ಆಗ ಭವ್ಯಾ ಗೌಡ ಅವರು ಅಳೋಕೆ ಆರಂಭಿಸಿದರು. ಇದು ಅವರಿಗೆ ಸಾಕಷ್ಟು ಶಾಕಿಂಗ್ ಎನಿಸಿತು.
ಈ ಸೀಸನ್ ಅಲ್ಲಿ ಫೇಕ್ ಎಲಿಮಿನೇಷನ್‌ಗಳು ನಡೆದಿವೆ. ಭವ್ಯಾ ಗೌಡ ಇನ್ನೇನು ಎಲಿಮಿನೇಟ್ ಅನ್ನುವಾಗ ಅವರನ್ನು ವಾಪಸ್ ಕರೆದುಕೊಂಡಿದ್ದಾರೆ. ಮೋಕ್ಷಿತಾ ಕಾರಿನಲ್ಲಿ ಹೊರಗೆ ಹೋಗಿ, ಪುನಃ ಬಂದಿದ್ದಾರೆ. ಚೈತ್ರಾ ಕುಂದಾಪುರ ಕೂಡ ಎಲಿಮಿನೇಷನ್ ಹೆಸರಿನಲ್ಲಿ ಹೊರಗೆ ಹೋಗಿ, ಮರಳಿ ಬಂದಿದ್ದಾರೆ. ಆದರೆ ಅವರು ಯಾರು ಕೂಡ ಮುಖ್ಯದ್ವಾರದಿಂದ ಹೊರಗೆ ಹೋಗಿರಲಿಲ್ಲ. ಆದರೆ ತ್ರಿವಿಕ್ರಮ್ ಅವರನ್ನು ಮುಖ್ಯದ್ವಾರದಿಂದಲೇ ಹೊರಗೆ ಕಳಿಸಲಾಗಿದೆ.