ಮನೆಯಲ್ಲಿ ಹಲ್ಲಿಗಳ ಕಾಟ ಹೆಚ್ಚಾಗಿದ್ಯಾ..? ಈ ಮನೆ ಮದ್ದು ಟ್ರೈ ಮಾಡಿ ಸಾಕು..

0
Spread the love

ಆಹಾರವನ್ನು ತೆರೆದಿಟ್ಟರೆ ಅದು ಹಲ್ಲಿಗಳಿಗೆ ಅಚ್ಚುಮೆಚ್ಚು. ಇದರಿಂದ ಮನೆಯಲ್ಲಿ ಹಲ್ಲಿಗಳು ಸಂತಾನೋತ್ಪತ್ತಿ ಮಾಡಲು ಸಹಾಯವಾಗುತ್ತದೆ. ಆದ್ದರಿಂದ ಉಳಿದಿರುವ ಆಹಾರವನ್ನು ಎಂದಿಗೂ ಮನೆಯಲ್ಲಿ ತೆರೆದಿಡಬೇಡಿ. ಇದು ನೊಣಗಳು ಮತ್ತು ಇರುವೆಗಳನ್ನು ಆಕರ್ಷಿಸುತ್ತದೆ. ಹಾಗೆಯೇ ಹಲ್ಲಿಗಳನ್ನು ಪರೋಕ್ಷವಾಗಿ ಆಕರ್ಷಿಸುತ್ತದೆ. ಇನ್ನು ಹಲ್ಲಿಗಳು ಕೀಟಗಳನ್ನು ತಿನ್ನುತ್ತವೆ.

Advertisement

ಎಲ್ಲಿ ಹೋದರೂ ಹಲ್ಲಿಗಳ ಕಾಟ ತಪ್ಪುವುದಿಲ್ಲ. ಏಕೆಂದರೆ ಹಲ್ಲಿಗಳು ಕೂಡ ಎಲ್ಲಾ ಜಾಗದಲ್ಲಿ ಇರುತ್ತವೆ. ಆದರೆ ಅವುಗಳು ನಮ್ಮ ಮನೆಯ ಹತ್ತಿರ ಸುಳಿಯದಂತೆ ಇರಲು, ನಮ್ಮಿಂದ ದೂರ ಹೋಗುವಂತೆ ಮಾಡಲು ಕೆಲವು ಉಪಾಯಗಳಿವೆ. ಈ ಸಣ್ಣ ಸರೀಸೃಪಗಳನ್ನು ಕೊಲ್ಲದೆ, ಮನೆಯಿಂದ ಹೊರಗೆ ಓಡಿಸುವುದಕ್ಕೆ ಕೆಲವು ಸರಳ ಮನೆಮದ್ದುಗಳನ್ನು ಕೊಡುತ್ತಿದ್ದೇವೆ ನೋಡಿ…

ಹಲ್ಲಿಗಳನ್ನು ಓಡಿಸಲು ಸುಲಭ ಮನೆ ಮದ್ದುಗಳಿವು

  1. ಹಲ್ಲಿಗಳಿರುವ ಸ್ಥಳಗಳಲ್ಲಿ ಮೊಟ್ಟೆಯ ಚಿಪ್ಪನ್ನು ನೇತು ಹಾಕುವುದು ಒಳ್ಳೆಯದು. ಈ ಚಿಪ್ಪಿನ ವಾಸನೆಗೆ ಹಲ್ಲಿಗಳು ಅಲ್ಲಿಂದ ಓಡಿ ಹೋಗುತ್ತವೆ.
  2. ಮನೆಯಲ್ಲಿ ಹಲ್ಲಿಗಳ ಹಿಂಡೆಯಿದ್ದರೆ ಐಸ್‌ ನೀರನ್ನು ಬಳಸಬಹುದು. ಹಲ್ಲಿಗಳ ಮೇಲೆ ತಣ್ಣನೆಯ ನೀರನ್ನು ಎರಚಿದರೆ, ಅವುಗಳಿಗೆ ಬೇಗನೆ ಓಡಲು ಆಗುವುದಿಲ್ಲ. ಆ ತಕ್ಷಣವೇ ಅದನ್ನು ಗುಡಿಸಿ ಹೊರಗೆ ಹಾಕಬಹುದು.
  3. ಹೊಗೆ ಸೊಪ್ಪಿನ ರಸವನ್ನು ಮನೆಯ ಮೂಲೆಗೆ ಸ್ಪ್ರ್ರೇ ಮಾಡಿದರೆ, ಅದರ ವಾಸನೆಗೆ ಹಲ್ಲಿಗಳು ನಿಲ್ಲುವುದೇ ಇಲ್ಲ.
  4. ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಮನೆಯ ಮೂಲೆಯಲ್ಲಿ ಇಟ್ಟರೆ, ಅದರ ವಾಸನೆಗೆ ಹಲ್ಲಿಗಳು ಬರುವುದೇ ಇಲ್ಲ.
  5. ಕಾಫಿ ಹುಡಿಗೆ ತಂಬಾಕು ಸೇರಿಸಿ, ಅದನ್ನು ಉಂಡೆ ಕಟ್ಟಿ ಮನೆಯ ಮೂಲೆ ಮೂಲೆಯಲ್ಲಿ ಇಡುವುದರಿಂದ ಹಲ್ಲಿಗಳ ಕಾಟದಿಂದ ಮುಕ್ತಿ ಹೊಂದಬಹುದು.
  6. ಮನೆಯ ಮೂಲೆ ಮೂಲೆಯಲ್ಲಿ ನ್ಯಾಫ್ತಲೀನ್ ಇಟ್ಟರೆ, ಇದರ ವಾಸನೆಗೆ ಹಲ್ಲಿ ಮತ್ತೆ ಆ ಕಡೆ ಸುಳಿಯುವುದೇ ಇಲ್ಲ.
  7. ಹಲ್ಲಿಗಳು ಇರುವ ಸ್ಥಳಗಳಲ್ಲಿ ಕರ್ಪೂರವನ್ನು ಇಟ್ಟರೆ, ಕರ್ಪೂರದ ಪರಿಮಳಕ್ಕೆ ಹಲ್ಲಿಗಳು ಅಲ್ಲಿಂದ ದೂರ ಹೋಗುತ್ತವೆ.
  8. ಕಾಳುಮೆಣಸಿನ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಹಲ್ಲಿಗಳು ಇದ್ದಲ್ಲಿ ಸ್ಪ್ರೇ ಮಾಡುವುದರಿಂದ ಹಲ್ಲಿಗಳು ಅಲ್ಲಿಂದ ಓಡಿಹೋಗುತ್ತವೆ.
  9. ಸೀಮೆಎಣ್ಣೆಯನ್ನು ಸ್ಪ್ರೇ ಮಾಡುವುದರಿಂದ ಹಲ್ಲಿಗಳ ಕಾಟದಿಂದ ಸುಲಭವಾಗಿ ಮುಕ್ತಿ ಹೊಂದಬಹುದು.

Spread the love

LEAVE A REPLY

Please enter your comment!
Please enter your name here