ವಿಜಯಸಾಕ್ಷಿ ಸುದ್ದಿ, ಹರಿಹರ : ನಗರದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭ ಜುಲೈ 9ರಿಂದ 11ರವರೆಗೆ ಸಂಜೆ 6 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜರುಗುವುದು.
ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗಲಿರುವ ಧರ್ಮ ಜಾಗೃತಿ ಸಮಾರಂಭವನ್ನು ಜು. 9ರಂದು ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸುವರು. ಮಳಲಿ ಸಂಸ್ಥಾನಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ಧೇಶ್ವರ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜುಂಜಪ್ಪ ಹೆಗ್ಗಪ್ಪನವರ, ಕೆ.ಎಮ್. ಸುರೇಶ್, ಚಿದಾನಂದಪ್ಪ, ಚಂದ್ರಶೇಖರ ಪೂಜಾರ್ ಭಾಗವಹಿಸುವರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಹರಿಹರದ ವಿದ್ಯಾರ್ಥಿಗಳಿಗೆ, ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಶ್ರೀ ರಂಭಾಪುರಿ ಜಗದ್ಗುರುಗಳಿಂದ ವಿಶೇಷ ಗುರುರಕ್ಷೆ ನಡೆಯುವುದು.
ಸುಲಫಲ್ ದೇವರಮಠದ ಗಜಾಪುರದ ಪಂಚಾಕ್ಷರಯ್ಯನವರು ಮತ್ತು ಮಕ್ಕಳು, ದಾವಣಗೆರೆಯ ಡಾ.ಸವಿತಾ, ಡಾ.ಮಹೇಶ್ ಮತ್ತು ಕುಟುಂಬ ವರ್ಗ, ಹಳೇಹರಲಾಪುರದ ಪಟೇಲ್ ಹಾಲಪ್ಪಗೌಡರು ಮತ್ತು ಕುಟುಂಬ ವರ್ಗ, ಪಟೇಲ್ ಬಸವರಾಜಪ್ಪಗೌಡರು ಮತ್ತು ಕುಟುಂಬ ವರ್ಗದವರು ಪ್ರಸಾದ ಸೇವೆಯನ್ನು ನಿರ್ವಹಿಸುವರು.
ಜುಲೈ 9ರಿಂದ 11ರವರೆಗೆ ಬೆಳಿಗ್ಗೆ 8.30 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರಿಂದ ಲೋಕ ಕಲ್ಯಾಣಾರ್ಥ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಪ್ರತಿದಿನ ಪ್ರಾತಃಕಾಲ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿಗೆ, ಶ್ರೀ ಬಸವೇಶ್ವರ ಮಂಗಲ ಮೂರ್ತಿಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ ಸಹಸ್ರ ಬಿಲ್ವಾರ್ಚನೆ, ಅಲಂಕಾರ ಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಡೆಯುವುದು.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.
ಜು. 10ರ ಸಮಾರಂಭದ ನೇತೃತ್ವವನ್ನು ಹರಪನಹಳ್ಳಿ ತೆಗ್ಗಿನ ಸಂಸ್ಥಾನ ಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಸಂಸದೆ ಪ್ರಭಾ ಮಲ್ಲಿಕಾರ್ಜುನ, ಶಾಸಕಿ ಲತಾ ಮಲ್ಲಿಕಾರ್ಜುನ, ಡಿ.ಜಿ. ಶಿವಾನಂದಪ್ಪ, ಬಿ.ಎಮ್. ವಾಗೀಶಸ್ವಾಮಿ, ಶಶಿಕುಮಾರ ಮೆಹರವಾಡೆ, ಬಿ.ಹಾಲೇಶಗೌಡ, ಕೊಂಡಜ್ಜಿ ಈಶ್ವರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
Advertisement